
ಮಂಗಳೂರು ಪಾಂಡೇಶ್ವರ ಠಾಣ ವ್ಯಾಪ್ತಿಯ ಸುಮಾರು 45 ವರ್ಷ ಬಸವರಾಜ್ ಎಂಬವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಾಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಮೀನಿನ ಮಾರುಕಟ್ಟೆ ಎದುರು ನಡೆದಿದೆ ಎತ್ತರ 51″ ಸಪೂರ ಶರೀರ, ಗೋಧಿ ಮೈ ಬಣ ಹೊಂದಿದ್ದು ಹೊಟ್ಟೆಯ ಎಡ ಭಾಗದಲ್ಲಿ, ಕಪ್ಪು ಮಚ್ಚೆ, ಬಲ ಕೈಯಲ್ಲಿ “LOVE” ಮತ್ತು ಬಲಕ್ಕೆ ತಟ್ಟಿನಲ್ಲಿ “ನವಿಲಿನ ಚಿಹ್ನೆಯ ಹಚ್ಚೆ ಗುರುತು ಕಂದು ಬಣ್ಣದ ಟೀ ಶರ್ಟ್ ಧರಿಸಿದ್ದು ಮೃತದೇಹವು ವೆನ್ಮಾಕ್ ಆಸ್ಪತ್ರೆ ಮಂಗಳೂರು ಇಲ್ಲಿನ ಶವಾಗಾರದಲ್ಲಿ ಇರಿಸಲಾಗಿದೆ ಮೃತರ ಸಂಬಂಧಿಕರು ಯಾ ಪರಿಚಯಸ್ಕರು ಇದ್ದಲ್ಲಿ ಪೊಲೀಸ್ ನಿರೀಕ್ಷಕರು, ಸಂಚಾರ ಪಶ್ಚಿಮ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ಇಲ್ಲಿ ಸಂಪರ್ಕಿಸ ಬಹುದಾಗಿದೆ ಸಂಪರ್ಕ ದೂರವಾಣಿ ಸಂಖ್ಯೆಗಳು: ನಗರ ನಿಸ್ತಂತು ಕೊಠಡಿ: 0824-2220800 ಸಂಚಾರ ಪಶ್ಚಿಮ ಪೊಲೀಸ್ ಠಾಣೆ: 0824-2220524 ಪೊಲೀಸ್ ನಿರೀಕ್ಷಕರು, ಸಂಚಾರ ಪಶ್ಚಿಮ ಪೊಲೀಸ್ ಠಾಣೆ: 9480802325

