ಶ್ರೀ ದುರ್ಗಾದೇವಿ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆಯು 19.03.2026 ರ ಮಧ್ಯಾಹ್ನ ಶ್ರೀ ದುರ್ಗಾ ಮಂದಿರ, ಪಡುಕುತ್ಯಾರಿನ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಜರಗಿತು.
ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ 2026-29ರ ಆಯ್ಕೆ ಪ್ರಕ್ರಿಯೆ ಜರಗಿ,ಈ ಕೆಳಕಂಡ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ದೀಕ್ಷಿತಾ ಜೀತೇಶ್ ಆಚಾರ್ಯ.ಉಪಾಧ್ಯಕ್ಷರಾಗಿ ಶ್ರೀಮತಿ ಹೇಮ ಪ್ರಕಾಶ್ ಆಚಾರ್ಯ
ಕಾರ್ಯದರ್ಶಿಯಾಗಿ ಶ್ರೀಮತಿ ಶಾಲಿನಿ ರತ್ನಾಕರ್ ಆಚಾರ್ಯ, ಕೋಶಾಧಿಕಾರಿಯಾಗಿ ಜಯಶ್ರೀ ಪ್ರವೀಣ್ಆಚಾರ್ಯ,ಜೊತೆ ಕಾರ್ಯದರ್ಶಿಯಾಗಿ ಸುಷ್ಮಾ ಉದಯ ಆಚಾರ್ಯರವರು ಆಯ್ಕೆಗೊಂಡಿರುತ್ತಾರೆ. ನೂತನ ಅಧ್ಯಕ್ಷರ ಫೋಟೋವನ್ನು ಲಗತಿಕರಿಸಲಾಗಿದೆ.
ವಂದನೆಗಳೊಂದಿಗೆ

