×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ‘ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ

 ಉಡುಪಿ: ‘ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ’ ಹೋರಾಟ ಸಮಿತಿ ವತಿಯಿಂದ ‘ವಕ್ಫ್ ತಿದ್ದುಪಡಿ ಕಾಯಿದೆ – 2025’ನ್ನು ವಿರೋಧಿಸಿ ಮಂಗಳವಾರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.  ಮನವಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ 2025 ಅಸಂವಿಧಾನಿಕವಾಗಿದ್ದು, ಅದು ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ. ಈ ತಿದ್ದುಪಡಿ ಕಾಯಿದೆಯನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸಲಾಯಿತು. ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಹೋರಾಟ ಸಮಿತಿ ನಿಯೋಗದಲ್ಲಿ ಮುಹಮ್ಮದ್ ಮೌಲ, ಸಹಬಾಳ್ವೆಯ ಸಂಚಾಲಕ ಪ್ರೊ. ಫಣಿರಾಜ್, ಸುಬಾನ್ ಹೊನ್ನಾಳ, ಇಸ್ಮಾಯಿಲ್ ಕಟಪಾಡಿ, ರಫೀಕ್ ಕುಂದಾಪುರ, ಮುಹ್ಮದ್ ಫೈಜ್, ಶಫಿ ಕಾಝಿ, ಜಿ. ಎಮ್ ಶರೀಫ್, ಅಝೀಜ್ ಉದ್ಯಾವರ, ಶೇಖ್ ಸಯ್ಯದ್ ಫರೀದ್, ಯಾಸೀನ್ ಕೋಡಿಬೆಂಗ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *