×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿ : ವಿಶ್ವ ಬ್ರಾಹ್ಮಣ ಯುವ ಸಂಘಟನೆ (ರಿ ) ಇವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮ

ದಿನಾಂಕ 18-12-2022ರಂದು ಆದಿತ್ಯವಾರ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿಯಲ್ಲಿ ತೃತೀಯ ಬಾರಿಯ ಸಾಮೂಹಿಕ ವಿವಾಹ ಆಯೋಜನೆಗೊಳಿಸಲಾಗಿದೆ ಎಂದು ವಿಶ್ವ ಬ್ರಾಹ್ಮಣ ಯುವ ಸಂಘಟನೆ ಕಾಪು ವಿಧಾನ ಸಭಾ ಕ್ಷೇತ್ರ ಉಡುಪಿ ಜಿಲ್ಲೆಯ ಆಯೋಜಕರು ಮಾಹಿತಿ ನೀಡಿದರು. ಕಾಪು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಯೋಗೀಶ್ ಆಚಾರ್ಯ ಅಲೆವೂರು ಮಾತನಾಡಿ ನಮ್ಮ ಸಂಘಟನೆಯು ಕಳೆದ 7 ವರ್ಷಗಳಿಂದ ಅಸಹಾಯಕರು ಮತ್ತು ದಾನಿಗಳ ಮಧ್ಯೆ ಸ್ನೇಹ ಸೇತುವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡು ಬಾರಿ ಸಾಮೂಹಿಕ ವಿವಾಹದ ಮೂಲಕ 25 ಜೋಡಿಗಳಿಗೆ ವಿವಾಹ, ನಿರಂತರ ವಧು- ವರಾನ್ವೇಷಣೆ ಕಾರ್ಯಕ್ರಮ ಆಯೋಜನೆಯಿಂದ 350ಕ್ಕೂ ಮಿಕ್ಕಿ ವಧು-ವರರನ್ನು ಒಂದಾಗಿಸುವ ಪ್ರಾಮಾಣಿಕ ಪ್ರಯತ್ನ ಯಶಸ್ವಿಯಾಗಿದೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ ಸಹಕಾರ, ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆಗೆ ನೆರವು, ಕೊರೋನಾ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಆಹಾರ ಸಾಮಾಗ್ರಿ ವಿತರಣೆ. ಹೀಗೆ ಹತ್ತು ಹಲವು ಸಮಾಜಮುಖ ಕಾರ್ಯಕ್ರಮಗಳ ಮೂಲಕ ಸಂಘಟನೆಯು ಮುನ್ನಡೆಯುತ್ತಿದೆ. ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸುಧಾಕರ್ ಆಚಾರ್ಯ ಬಿಳಿಯಾರು  ಯೋಗೀಶ್ ಆಚಾರ್ಯ ಅಲೆವೂರು ರತ್ನಾಕರ ಕುರ್ಕಾಲು ಪ್ರಧಾನ ಕಾರ್ಯದರ್ಶಿವಿಜಯ್ ಆಚಾರ್ಯ ಪಡುಬಿದ್ರಿ  ಮತ್ತಿತರರು ಉಪಸ್ಥಿತರಿದ್ದರು 

video link

https://youtu.be/crbcbrqM9t0

Leave a Reply

Your email address will not be published. Required fields are marked *