×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅಂಗಡಿಗೆ ನುಗ್ಗಿದ ಕಳ್ಳರು ನಗದು ಕಳವು- ಪ್ರಕರಣ ದಾಖಲು

ಉದ್ಯಾವರ ಬಲಾಯಿಪಾದೆಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಕೊರಂಗ್ರಪಾಡಿ ಗ್ರಾಮದ ಹೊನ್ನಪ್ಪ ಶಿವಣ್ಣ ಕುಂಬಾರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಬಲಾಯಿಪಾದೆಯ ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಮಂಜುಶ್ರೀ ಹರ್ಬಲ್ ಎಂಬ ಅಂಗಡಿಯನ್ನುನಡೆಸಿಕೊಂಡಿದ್ದಾರೆ.ನ. 25 ರ ರಾತ್ರಿಯಿಂದ ನ 26 ರ ಬೆಳಿಗ್ಗಿನ ಅವಧಿಯಲ್ಲಿ ಈ ಅಂಗಡಿಯ ಶೆಟರ್ ಅನ್ನು ಮುರಿದು ಒಳ ನುಗ್ಗಿದ ಕಳ್ಳರು ಆಫೀಸ್‌ನ ಬೀಗ ಮುರಿದು, ಕ್ಯಾಶ್ ಡ್ರಾವರಿನಲ್ಲಿದ್ದ 46, 000 ರೂ. ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *