×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿ : ಆಟೋ ರಿಕ್ಷಾ ತಂಗುದಾಣಕ್ಕೆ ಲೋಕಾಯುಕ್ತದಿಂದ ನೋಟೀಸ್ : ಸಭೆ ನಡೆಸಿದ – ಶಾಸಕರು

ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಪೇಟೆಯಲ್ಲಿ ಇರುವ ರಿಕ್ಷಾ ನಿಲ್ದಾಣ ತೆರವಿಗೆ ಲೋಕಾಯುಕ್ತದಿಂದ ನೋಟೀಸ್ ಬಂದ ಹಿನ್ನಲೆಯಲ್ಲಿ ರಿಕ್ಷಾ ಮಾಲಕ – ಚಾಲಕರ ಸಂಘ ಹಾಗೂ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತ್ ನಲ್ಲಿ ಸಮಾಲೋಚನ ಸಭೆಯನ್ನು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಲೋಕೋಪಯೋಗಿ ಇಲಾಖೆ ಆದೇಶವನ್ನು ಪುನರ್ ಪರಿಶೀಲಿಸಿ ಕಟಪಾಡಿ ಅಂಡರ್ ಪಾಸ್ ಆಗುವವರೆಗೆ ಸದರಿ ಇದ್ದ ಸ್ಥಳದಲ್ಲಿ ರಿಕ್ಷಾ ನಿಲ್ದಾಣ ಇದ್ದು.. ವಸ್ತು ಸ್ಥಿತಿಯನ್ನು, ರಿಕ್ಷಾ ಚಾಲಕರಿಗೆ ತೊಂದರೆಯಾಗದಂತೆ ವರದಿ ಮಾಡುವಂತೆ ಸೂಚಿಸಿದರು ಹಾಗೂ ರಿಕ್ಷಾ ಚಾಲಕರೊಂದಿಗೆ ಅವರ ಸಮಸ್ಯೆಗಳ ಪರಿಹಾರಕ್ಕೆ ಸದಾ ಜೊತೆ ನಿಲ್ಲುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಭಟ್, ಸಹಾಯಕ ಇಂಜಿನಿಯರ್ ಸವಿತ, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ಪೂವಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿತಾ, ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ವರ್ತಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಆಟೋ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *