×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅ.7: ಸವಿತಾ ಸಮಾಜ ವಿವಿಧೋದ್ದೇಶ ಸೌ.ಸ. ಸಂಘದ ಕಾರ್ಕಳ ಶಾಖೆಯ ನೂತನ ಕಚೇರಿ ಶುಭಾರಂಭ

ಕಾರ್ಕಳ : ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಕಚೇರಿಯ ಉದ್ಘಾಟನೆ ಸಮಾರಂಭವು ಇದೇ ಅ.7ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 2007ರಲ್ಲಿ ಸವಿತಾ ಸಮಾಜ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು.

ಸಂಘವು ಪ್ರಸ್ತುತ 5 ಶಾಖೆಗಳನ್ನು ಹೊಂದಿದ್ದು, ಅಂಬಲಪಾಡಿ ಉಡುಪಿಯಲ್ಲಿ ಪ್ರಧಾನ ಕಚೇರಿ ಹಾಗೂ ಕಾರ್ಕಳ, ಕುಂದಾಪುರ ಮತ್ತು ಕಾಪು, ಬ್ರಹ್ಮಾವರದಲ್ಲಿ ಶಾಖೆಗಳನ್ನು ಹೊಂದಿದೆ. ಈ ಶಾಖೆಗಳಲ್ಲಿ ಬ್ಯಾಂಕಿಗ್‌ ಸೌಲಭ್ಯ ಇರುವ ಜೊತೆಗೆ ಸೆಲೂನ್ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಇತ್ತೀಚಿಗೆ ಎರಡು ಅಂಗ ಸಂಸ್ಥೆಗಳಾದ ಟೆಶೂ, ಪೇಪರ್ ಉತ್ಪಾದನ ಘಟಕ ಅಮ್ಮುಂಜೆ ಮತ್ತು ಸವಿತಾ ಡಯಾಗೋಸ್ಟಿಕ್ ಸೆಂಟರ್ ಅಂಬಲಪಾಡಿ ಆರಂಭಿಸಲಾಗಿದ್ದು ಇದು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು, ವಿಶ್ವನಾಥ್ ಭಂಡಾರಿ ನಿಂಜೂರು, ನಾಗೇಶ್ ಭಂಡಾರಿ ಬಜಗೋಳಿ, ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *