ಕಾಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಠ ಗಾಯನ ರಾಷ್ಟ್ರಿಯ ಹಾಗೂ ನಾಡ ಹಬ್ಬಗಳ ಆಚರಣ ಸಮಿತಿ ಕಾಪು ಪುರಸಭೆ ವತಿಯಿಂದ ಶುಕ್ರವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ ನಡೆಯಿತು ಕಾಪು ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ ರವರು ಕನ್ನಡ ನಾಡು ನುಡಿಯ ಪ್ರಮಾಣವಚನ ಬೋದಿಸಿದರು ಕಾಪು ಶಾಸಕ ಲಾಲಾ ಜಿ ಮೆಂಡನ್ ಅಧ್ಯಕ್ಷತೆಯನ್ನು ವಹಿಸಿಕೊಂಡರು ಸಂದರ್ಭದಲ್ಲಿ ಮಾತನಾಡಿ ರಾಜ್ಯ ಸರಕಾರದ ಆದೇಶದಂತೆ ಕರ್ನಾಟಕದಾದ್ಯಂತ ಒಂದೇ ಸಮಯದಲ್ಲಿ ಆರು ಕರ್ನಾಟಕ ರಾಜ್ಯದ ಗಾಯನವನ್ನು ಒಂದು ಕೋಟಿಗೂ ಅಧಿಕ ಜನರು ನಾಟಕ ದಾದ್ಯಂತ ಹಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗುತಿದೆ ಎಂದರು ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂನತ ವಿದ್ಯಾ ಚೇತನ,ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಗಾಯನ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳಸುವ ಕುರಿತು ಸಂಕಲ್ಪ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿವಿಧ ಶಾಲಾ ವಿದ್ಯಾರ್ಥಿಗಳು ಕಾಲೇಜಿ ಸಿಬ್ಬಂದಿಗಳು ಪುರಸಭಾ ಸದಸ್ಯರು ಪುರಸಭಾ ಸಿಬ್ಬಂದಿಗಳು ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು

