×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಾನ್ಯ ಶಾಸಕರಿಂದ ಪಡುಬಿದ್ರೆ 5 ನೇ ವಾರ್ಡ್ ನಲ್ಲಿ 1.10ಕೋಟಿ ಕಾಮಗಾರಿಕೆ ಉದ್ಘಾಟನೆ

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಡುಬಿದ್ರೆ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡಿನ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಸುಮಾರು 1 ಕೋಟಿ 10 ಲಕ್ಷ ರೂಗಳ ಅಭಿವೃದ್ಧಿಗೊಂಡ 3 ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದರು ಈ ಹಿಂದೆ ಕಾರ್ಯಕರ್ತರ ಭೇಟಿಗೆ ವಾರ್ಡ್ಗೆ ಬಂದಾಗ ಸ್ಥಳೀಯರು ರಸ್ತೆಯ ಬೇಡಿಕೆಯನ್ನು ಇಟ್ಟಿದ್ದರು.. ಆ ಸಂದರ್ಭದಲ್ಲಿ ಆದಷ್ಟು ಬೇಗ ಅನುದಾನ ಮಿಸಲಿರಿಸುವ ಭರವಸೆ ನೀಡಿದ್ದು. ಇದೀಗ ಈ ಭಾಗದ ರಸ್ತೆಗೆ 1 ಕೋಟಿ ಅನುದಾನದಿಂದ, ಅಪ್ಪು ಪೂಜಾರಿ ಮನೆ ಸಮೀಪ ರಸ್ತೆ ಅಭಿವೃದ್ಧಿ 5 ಲಕ್ಷ, ರಘುಪತಿ ಭಟ್ ಮನೆ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ಅನುದಾನದಿಂದ ರಸ್ತೆ ಅಭಿವೃದ್ಧಿಗೊಂಡು ಭರವಸೆಯಂತೆ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಲಾಗಿದೆ, ಹಾಗೂ ಪಂಚಾಯತ್ ವ್ಯಾಪ್ತಿಯ ಉಳಿದ ವಾರ್ಡ್ಗಳಲ್ಲಿ ಕೋಟಿ ರೂಗಳ ಅನುದಾನ ಮಂಜೂರುಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೆರವೇರಿಸಲಾಗುವುದು ಹಾಗೂ ಬಿಜೆಪಿ ಆಡಳಿತವಿರುವ ಗ್ರಾಮ ಪಂಚಾಯತ್ ಈ ಭಾಗದ ಜನರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿತ್ತಿದ್ದು ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದು. ಹಾಗೂ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರುಈ ಸಂದರ್ಭದಲ್ಲಿ ಪಡು ಪಂಚಾಯತ್ ಅಧ್ಯಕ್ಷರು ರವಿ ಶೆಟ್ಟಿ, ಉಪಾಧ್ಯಕ್ಷರು ಕುಮಾರಿ ಯಶೋಧ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಂದ್ರ ಪೂಜಾರಿ, ವಿನಾಯಕ್ ಪುತ್ರನ್ , ಅಶೋಕ್ ಪೂಜಾರಿ ಹಾಗೂ ಸ್ಥಳೀಯ ಮುಖಂಡರಾದ ಜಗದೀಶ್ ಮುರುಡಿ, ರಾಜೇಂದ್ರ ಪ್ರಭು, ಲಕ್ಷ್ಮಣ್ ಪೂಜಾರಿ, ಸುಧಾ ಪೂಜಾರಿ, ಅಪ್ಪು ಪೂಜಾರಿ ಹಾಗೂ ಸ್ಥಳೀಯರು, ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *