ಕಾಪು ವಿಧಾನಸಭಾಕ್ಷೇತ್ರ ಯುವಕಾಂಗ್ರೆಸ್ ಸಮಿತಿ ಇದರ ನೇತೃತ್ವದಲ್ಲಿ ದಿನಾಂಕ 19.06.2025 ರಂದು ಲೋಕಸಭೆ ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ಪರಮೋಚ್ಚ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಡುಬಿದ್ರಿ ಇದರ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಯುವಕಾಂಗ್ರೆಸ್ ಸಮಿತಿ ವತಿಯಿಂದ ಕೈಪಿಡಿ ಪುಸ್ತಕ(ಗೈಡ್) ವಿತರಣಾ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮಕ್ಕೆ ಕಾಪು ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್, ಉಪಾಧ್ಯಕ್ಷರಾದ ಲತೀಫ್ ಶಿರ್ವ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ ಸುಕುಮಾರ್, ಶಾಲಾ ಸಲಹಾ ಸಮಿತಿ ಉಪಾಧ್ಯಕ್ಷರಾದ ವಸಂತ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣ ಬಂಗೇರ,ರೋಟರಿ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್, , ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಯ ಉಪಾಧ್ಯಕ್ಷರಾದ ಕೀರ್ತಿ ಕುಮಾರ್, ಕಾಪು ವಿಧಾನಸಭಾ ಕ್ಷೇತ್ರದ ಯುವಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಅದ ರಂಜಿತಾ ಪ್ರಶಾಂತ್ ರೇಶ್ಮಾ ಪಡುಬಿದ್ರಿ, ಅರ್ಫಾಜ್, ರಿಯಾನ್, ಶಫಿಕ್, ಎಮ್ ಎಸ್, ಹಕೀಮ್, ಬಿಲಾಲ್ ಮಣಿಪುರ, ಪಡುಬಿದ್ರಿ, ಪಂಚಾಯತ್ ಸದಸ್ಯರಾದ ಶ್ರೀಮತಿ ಜ್ಯೋತಿ ಮೆನನ್, ಶ್ರೀಮತಿ ಶೋಭಾ ಕೋಟ್ಯಾನ್, ಶ್ರೀಮತಿ ಸುಚರಿತಾ ಅಮೀನ್, ಕಾಪು ಬ್ಲಾಕ್ ಯುವಕಾಂಗ್ರೆಸ್ ಸಮಿತಿ ಉತ್ತರ ಹಾಗೂ ದಕ್ಷಿಣ ದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ರಾಹುಲ್ ಗಾಂಧಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.

