×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೂರು ಕಸಾಯಿಖಾನೆ ಮುಟ್ಟುಗೋಲು

ಮಂಗಳೂರು  ಮೂರು ಅಕ್ರಮ ಕಸಾಯಿಖಾನೆ  ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (4) ಅಡಿ ಮುಟ್ಟುಗೋಲು ಹಾಕಲಾಗಿದೆ. ಅಕ್ರಮ ‌ಕಸಾಯಿಖಾನೆಯ ಜಾಗಗಳನ್ನು ಸರ್ಕಾರ ಅಧಿಕೃತವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಕಸಾಯಿಖಾನೆ ಜಾಗ ವಶಕ್ಕೆ ಪಡೆದು ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಣಿ ಮಾಡಲಾಗಿದೆ. ಕಾಟಿಪಳ್ಳ, ಅರ್ಕುಳ ಮತ್ತು ಗಂಜಿ ಮಠದಲ್ಲಿ ಅಕ್ರಮ ಕಸಾಯಿಖಾನೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ವಶಪಡಿಸಿಕೊಳ್ಳಲಾದ ಜಾಗಗಳ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ‌ಇಲಾಖೆ (revenue department) ಆದೇಶಿಸಿದೆ. ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂಗೆ ಸೇರಿದ ಜಾಗಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಜ್ಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ಪ್ರಕಾರ ಕಾಯ್ದೆ ಜಾರಿ ‌ಮಾಡಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.

Leave a Reply

Your email address will not be published. Required fields are marked *