ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಮೀನು ಟ್ರೇ ತುಂಬಿದ ಲಾರಿ ಉಚ್ಚಿಲ ಮೂಳೂರು ಮಧ್ಯೆ ಸಲಪಿ ಮಸೀದಿ ಬಳಿ ರಸ್ತೆ ಕಾಮಗಾರಿಯು ಸಲುವಾಗಿ ಡೈವರ್ಶನ್ ಇದ್ದುದನ್ನು ಲೆಕ್ಕಿಸದೆ ಚಲಿಸಿದ ಕಾರಣದಿಂದಾಗಿ ಮೀನು ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮೀನು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಮಂಗಳೂರಿನಿಂದ ಮಲ್ಪೆ ಫಿಶ್ ಮಿಲ್ ಗೆ ಸಾಗಾಟ ಮಾಡುವ ಮೀನು ಆದ್ದರಿಂದ ಆಸುಪಾಸಿನಲ್ಲಿ ಮೂಗು ಮುಚ್ಚಿ ನಡೆಯುವ ಪ್ರಸಂಗ ಎದುರಾಗಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ನಿರ್ವಾಹಕ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

