×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ರವೀಂದ್ರ ಪೂಜಾರಿ ಮರು ಆಯ್ಕೆ.

ಕಾಪು : ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ( ರಿ ) ಬೆಂಗಳೂರು, ಇದರ ಕಾಪು ತಾಲೂಕಿನ ಮಹಾ ಸಭೆಯು ಕಾಪು ಹೋಟೆಲ್ ಮಂದಾರ ದಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಶೆಣೈ , ಉಪಾಧ್ಯಕ್ಷರು ಗಳಾದ ಅಶೋಕ್ ಸುವರ್ಣ , ಕೃಷ್ಣ ಕುಲಾಲ್, ಕಾರ್ಯದರ್ಶಿ ಸುರೇಶ್ ಜತ್ತನ್ನ , ಕೋಶಾಧಿಕಾರಿ ಆನಂದ ಶೇರಿಗಾರ, ಸಂಘಟನಾ ಕಾರ್ಯದರ್ಶಿ ಸುದರ್ಶನ್ ರವರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ, ಉಡುಪಿ ಜಿಲ್ಲೆಯಲ್ಲಿ ಸಂಘವನ್ನು ಹುಟ್ಟು ಹಾಕಿ, ಸ್ಥಾಪಕ ಅಧ್ಯಕ್ಷರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ರಾವ್ ಎಮ್. ರವರನ್ನು ಕಾಪು ತಾಲೂಕು ಸಮಿತಿಯಿಂದ ಸನ್ಮಾನಿಸಲಾಯಿತು. ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಮೇಲುಸ್ತುವಾರಿಯೊಂದಿಗೆ ಚುನಾವಣೆ ನಡೆದು, ಚುನಾವಣಾ ಪ್ರಕ್ರಿಯೆಯಲ್ಲಿ ಮಹಾದೇವಿ ಎಲೆಕ್ಟ್ರಿಕಲ್ಸ್ ನ ರವೀಂದ್ರ ಪೂಜಾರಿ ಯವರು ಮರು ಆಯ್ಕೆಯಾಗಿರುತ್ತಾರೆ ಎಂದು ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಶೆಣೈ ರವರು ಘೋಷಿಸಿದರು. ಹಾಗೆಯೇ ಉಪಾಧ್ಯಕ್ಷರಾಗಿ ವಸಂತ ಸುವರ್ಣ, ಕಾರ್ಯದರ್ಶಿಯಾಗಿ ಗಿರಿದರ್, ಜತೆ ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಆಝಮ್ ರವರು ಅವಿರೋಧವಾಗಿ ಆಯ್ಕೆಯಾಗಿರುವರು ಎಂದು ತಿಳಿಸಿದರು. ಹಾಗೆಯೇ ಜಿಲ್ಲಾ ಮಟ್ಟದ ಸಂಘದ ಪ್ರಚಾರ ಸಭೆಯ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ರವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮವು ಸುಪ್ರೀತ್ ರವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಸಂಘದ ಉಪಾಧ್ಯಕ್ಷರು ಹೇಮಂತ್ ಪಡುಬಿದ್ರಿ ಸ್ವಾಗತಿಸಿದರು. ಕಾರ್ಯದರ್ಶಿ ದೇವರಾಜ ಕೋಟ್ಯಾನ್ ವರದಿ ವಾಚಿಸಿದರು. ಕೋಶಾಧಿಕಾರಿ ಮೋಹನ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಸಭಾಧ್ಯಕ್ಷತೆಯನ್ನು ರವೀಂದ ಪೂಜಾರಿ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ರವರು ಧನ್ಯವಾದ ನೀಡಿದರು. ಕಾರ್ಯಕ್ರಮವನ್ನು ಅನ್ವರ್ ಅಲಿ ಕಾಪು ಮತ್ತು ಪ್ರಕಾಶ್ ಅಂಚನ್ ನಿರೂಪಿಸಿದರು. ಕಾರ್ಯಕ್ರಮದ ಮುಕ್ತಾಯದೊಂದಿಗೆ ರಾಷ್ಟ್ರ ಗೀತೆ ಹಾಡಲಾಯಿತು.

Leave a Reply

Your email address will not be published. Required fields are marked *