
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಉಚ್ಚಿಲ ದಸರಾ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದರು. ನವದುರ್ಗೆ ಹಾಗೂ ಸರಸ್ವತಿ ಮೂರ್ತಿಗಳನ್ನು ವೀಕ್ಷಿಸಿದ ಸಚಿವ ಸುನಿಲ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ರವರು ಸಚಿವರಿಗೆ ಪ್ರಸಾದ ವಿತರಿಸಿದರು. ದೇವಳದ ವತಿಯಿಂದ ಮೊಗವೀರ ಮುಂದಾಳು ಜಿ ಶಂಕರ್‌ರವರು ಸಚಿವ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಗುಂಡು ಬಿ ಅಮೀನ್, ವಾಸುದೇವ ಸಾಲಿಯಾನ್ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

