
ಕಾಪು ಪುರಸಭೆ ಹಾಗೂ ವಿವಿಧ ಸಂಘಟನೆಗಳು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಆಂದೋಲನವನ್ನು ಭಾನುವಾರ ಕಾಪು ಬೀಚ್‌ನಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಕಾಪು ಕ್ಷೇತ್ರದಾದ್ಯಂತ ಈ ಕಾರ್ಯಕ್ರಮ ಪ್ರಾರಂಭಗೊAಡಿದೆ ಎಂದರು. ಮಹಾತ್ಮಾ ಗಾಂಧಿ ಮತ್ತು ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಗಣ್ಯರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಕಾಪು ತಹಶಿಳ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಉಪ ತಹಶೀಲ್ದಾರ್ ರವಿಶಂಕರ್, ಪುರಸಭಾಧಿಕಾರಿ ವೆಂಕಟೇಶ ನಾವಡ. ಶಿಲ್ಪ ಜಿ ಸುವರ್ಣ, ಗಂಗಾಧರ ಸುವರ್ಣ, ವಿದ್ಯಾಂಗ ಇಲಾಖಾಧಿಕಾರಿ ಶಂಕರ್ ಸುವರ್ಣ, ಪರಿಸರ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪುರಸಭಾ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

