
ಉಡುಪಿ : ವೈಷ್ಣವಿ ಆಚಾರ್ಯ ಇವರ ಮನೆಯಲ್ಲಿ ಘಟನೆ ನಡೆದಿದೆ ರಾತ್ರಿ 10: 00 ಗಂಟೆಯಿಂದ ಬೆಳಿಗ್ಗೆ 09:00 ಗಂಟೆ ನಡುವೆ ಯಾರೂ ಇಲ್ಲದೆ ಇರುವ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಮೂಲಕ ಒಳಪ್ರವೇಶಿಸಿ, ರೂಮ್ ನಲ್ಲಿದ್ದ ಅಲ್ಮೇರಾ ಬಾಗಿಲನ್ನು ಮುರಿದು ತೆಗೆದು, ಗೋದ್ರೇಜ್ ಲಾಕರ್ ನಲ್ಲಿದ್ದ ಡೈಮಂಡ್ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್-1, ಬೆಳ್ಳಿಯ ತಟ್ಟೆಗಳು-2, ಚಿನ್ನದ ಲೇಪನ ಇರುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 3,48,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

