ಉಡುಪಿ, ಫೆ.15: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಕಚೇರಿಯ ಜಯಂತಿ ಎಫ್ . ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಕಲ್ಮಾಡಿಯ ಲೂವಿಸ್ ಲೋಬೋ ಹಾಗೂ ಉಪಾಧ್ಯಕ್ಷರಾಗಿ ಜೇಮ್ಸ್ ಡಿ’ಸೋಜಾ ಆಯ್ಕೆಯಾಗಿದ್ದಾರೆ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಎ ಫೆರ್ನಾಂಡಿಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು

ನೂತನವಾಗಿ ಮಂಡಳಿಯ ನಿರ್ದೇಶಕ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಗಿದೆ. ಇನ್ನೇಶಿಯಸ್ ಮೋನಿಸ್, ಮೂಡುಬೆಳ್ಳೆ, ಪರ್ಸಿ ಜೆ. ಡಿ’ಸೋಜಾ, ಕಲ್ಯಾಣಪುರ, ಅರ್ಚಿಬಾಲ್ಡ್ ಎಸ್. ಡಿಸೋಜಾ, ತೊಟ್ಟಂ, ಡಾ| ನೇರಿ ಕರ್ನೇಲಿಯೋ, ಕಕ್ಕುಂಜೆ-ಅಂಬಾಗಿಲು, ಲೋಯ್ಸಟ್ ಜೆ. ಕರ್ನೇಲಿಯೋ, ಕಡೇಕಾರು, ರಿಚರ್ಡ್ ಡಾಯಸ್, ಸಂತೆಕಟ್ಟೆ, ರಾಬರ್ಟ್ ಎಂ ಡಿ’ಸೋಜಾ, ಉಡುಪಿ; ಡಾಲ್ಮೀ ವಿ. ಲೂವಿಸ್, ಉಡುಪಿ, ವಿಲಿಯಂ ಬಿ. ಮಚಾದೋ, ಶಿರ್ವ, ಓನಿಲ್ ಜೆ. ಡಿ’ಸೋಜಾ, ಕೊಡವೂರು, ಜೆನಿವಿವ್ ಎಂ. ಮಿನೇಜಸ್, ಕಲ್ಮಾಡಿ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹೊಸ ಆಡಳಿತ ಮಂಡಳಿಯ ಚುನಾವಣೆ ಫೆ.2 ರಂದು ನಡೆದಿತ್ತು. ಎಲ್ಲಾ 13 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು. ಉಳಿತಾಯ, ಅಭಿವೃದ್ಧಿ ಮತ್ತು ಹಂಚಿಕೆಯ ದೃಷ್ಟಿಯಲ್ಲಿ ಸುಮಾರು 28 ವರ್ಷಗಳ ಹಿಂದೆ ಸ್ಥಾಪನೆಯಾದ ಸಹಕಾರಿ ಸಂಘವು ಉಡುಪಿಯ ಕೆಎಂ ರಸ್ತೆಯಲ್ಲಿರುವ ತನ್ನ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

