×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಿಯದರ್ಶಿನಿ ಸಮಾಜಮುಖಿ ಕಾರ್ಯಕ್ರಮ ಅಭಿನಂದನೀಯ

ಕಳೆದ ನಾಲ್ಕು ವರ್ಷಗಳ ಹಿಂದೆ ಪಡುಬಿದ್ರೆಯಲ್ಲಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಶಾಖೆಯು ಸ್ಥಳೀಯವಾಗಿ ಉತ್ತಮ ವ್ಯವಹಾರದೊಂದಿಗೆ ಸಮಾಜದ ಪ್ರೀತಿ ಗಳಿಸಿರುವುದಲ್ಲದೆ ಇಂತಹ ಸಮಾಜಮುಖಿ ಕಾರ್ಯಕ್ರಮವು ಏರ್ಪಡಿಸಿರುವುದು ಅಭಿನಂದನೀಯ. ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಪಡುಬಿದ್ರಿ ಇಎಸ್ ಐ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆದ ಡಾ| ಸಾತ್ವಿಕ್ ಪ್ರಮೋದ್ ರವರು ಶುಭಹಾರೈಸಿದರು.

ಅವರು ಪಡುಬಿದ್ರಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಶಾಖೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಏರ್ ಕೂಲರ್ ವಿತರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ರಾಜ್ಯ ಪ್ರಶಸ್ತಿ ವಿಜೇತ ಸಾಹಿತಿಯಾದ ಶ್ರೀಮತಿ ಫಾತಿಮಾ ರಲಿಯಾ ಹೆಜಮಾಡಿ ಯವರು ಮಾತನಾಡಿ ಪ್ರಿಯದರ್ಶಿನಿ ಸೊಸೈಟಿಯು ಇತರ ಸೊಸೈಟಿಗಳಂತೆ ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೆ ಅಂಗನವಾಡಿಯ ಬಡ ವಿದ್ಯಾರ್ಥಿಗಳಿಗೂ ಉತ್ತಮ ವ್ಯವಸ್ಥೆಗಾಗಿ ಇಂತಹ ವ್ಯವಸ್ಥೆಗಳನ್ನು ನೀಡುತ್ತಿರುವುದು ಅಭಿನಂದನೀಯ ಇವರ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತ ನುಡಿದರು.

ಅಧ್ಯಕ್ಷತೆ ವಹಿಸಿಕೊಂಡ ಸೊಸೈಟಿ ಅಧ್ಯಕ್ಷರಾದ ಹೆಚ್ ವಸಂತ್ ಬೆರ್ನಾರ್ಡ್ ರವರು ಮಾತನಾಡಿ ಪಡುಬಿದ್ರೆ ಶಾಖೆಯು ಉತ್ತಮ ಲಾಭಾಂಶದೊಂದಿಗೆ ಉತ್ತಮ ಅಭಿವೃದ್ಧಿ ಹೊಂದಲು ಸಹಕರಿಸಿದ ಸ್ಥಳೀಯ ಗ್ರಾಹಕರಿಗೂ, ಸದಸ್ಯರಿಗೂ ಮತ್ತು ಮಾಧ್ಯಮ ಮಿತ್ರರಿಗೂ ಕೃತಜ್ಞತೆ ಅರ್ಪಿಸಿದರು.

ಅಬ್ಬೇಡಿ ಅಂಗನವಾಡಿ ಕೇಂದ್ರದ ಶ್ರೀಮತಿ ಶ್ಯಾಮಲಾ, ಗಣಪತಿ ದೇವಸ್ಥಾನ ಕೆಳಗಿನಪೇಟೆ ಅಂಗನವಾಡಿ ಕೇಂದ್ರದ ಶ್ರೀಮತಿ ಅನಿತಾ, ಸಾಗರ್ ವಿದ್ಯಾಮಂದಿರ ಅಂಗನವಾಡಿ ಕೇಂದ್ರದ ಶ್ರೀಮತಿ ಶೋಭಾ, ಬೀಡಿನ ಕೆರೆ ಅಂಗನವಾಡಿ ಕೇಂದ್ರದ ಶ್ರೀಮತಿ ಲೀಲಾ ರವರು ಸೊಸೈಟಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ನಿರ್ದೇಶಕರಾದ ಶ್ರೀ ಗಣೇಶ್ ಪ್ರಸಾದ್ ದೇವಾಡಿಗ, ಶ್ರೀ ಧನಂಜಯ ಮಟ್ಟು, ಶ್ರೀ ಅನಿಲ್ ಪೂಜಾರಿ ಸಸಿಹಿತ್ಲು ಭಾಗವಹಿಸಿದರು. ಶಾಖಾ ಪ್ರಬಂಧಕ ರಾದ ಶ್ರೀಮತಿ ಅಂಜಲಿ ಉಳ್ಳಾಲ್ ಎಸ್ ರವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುದರ್ಶನ್ ಪೂಜಾರಿ ರವರು ವಂದಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಪರ್ಣಾಲಿ ಕಿಣಿ ಮತ್ತು ರಕ್ಷಿತ್ ರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *