×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಕರಾವಳಿಯ ‘ಅಬ್ಬರದ ಪಿಲಿ ಪಂಥ’ ಹುಲಿವೇಷ ಸ್ಪರ್ಧೆ

ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ ‘’ಅಬ್ಬರದ ಪಿಲಿ ಪಂಥ 2026 ಸೀಸನ್ 1″ ಪುರುಷರ ಹುಲಿವೇಷ ಸ್ಪರ್ಧೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಿದರುಪುರುಷರ ಹುಲಿ ವೇಷ ಸ್ಪರ್ಧೆ- ಪಿಲಿ ಪಂಥದಲ್ಲಿ ಪ್ರಬಲ ಹತ್ತುತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಉಪ್ಪಳ ಹನುಮಾನ್ ಟೈಗರ್ಸ್ ತಂಡವು ಉಚ್ಚಿಲ ದಸರಾ ಪಿಲಿ ಪಂಥ ಟ್ರೋಫಿ ಜೊತೆಗೆ 3 ಲಕ್ಷ ನಗದು ಪಡೆದುಕೊಂಡಿತು

ತೀವ್ರ ಸ್ಪರ್ಧೆ ಒಡ್ಡಿದ ಪುರಲ್ಲ ಅಪ್ಪನ ಮೋಕೆದ ಬೊಳ್ಳಿಲ್ ‌ ಪೊಳಲಿ ಟೈಗರ್ಸ್ ದ್ವಿತೀಯ ಪಿಲಿ ಪಂಥ ಟ್ರೋಫಿ ಸಹಿತ ನಗದು 2 ಲಕ್ಷ ರೂ. ಪಡೆದರೆ ಕುರ್ಕಾಲ್ ಟೈಗರ್ಸ್ ಕುರ್ಕಾಲು ತಂಡವು ತೃತೀಯ ಟ್ರೋಫಿ ಟ್ರೋಫಿ ಜೊತೆಗೆ 1 ಲಕ್ಷ ರೂ. ನಗದು ಪಡೆದುಕೊಂಡಿತು

ಈ ಸಂದರ್ಭ ಪಿಲಿ ಪಂಥದ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ವಿ ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಉಡುಪಿ ಉಚ್ಚಿಲ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಚಿತ್ರನಟಿ ಚಿರಶ್ರೀ ಅಂಚನ್,ರಚನ್ ಸಾಲ್ಯಾನ್ ಸಂಧ್ಯಾದೀಪ ಸುನೀಲ್, ಸುಗುಣ ಕರ್ಕೇರ, ಮನೋಜ್ ಕಾಂಚನ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *