ಕ್ರೀಡಾಪ್ರೇಮಿಗಳಿಗೆ ಹೊಸ ತಾಣವಾಗಿ ಉದ್ಯಾವರದ ಗುಡ್ಡೆಅಂಗಡಿಯ ಸ್ಕೈ ಡೇಲ್ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ ‘ಆರ್ ಸ್ಪೋರ್ಟ್ಸ್’ ಮಳಿಗೆಯನ್ನು ಅಪ್ಪು ಉದ್ಯಾವರ (ರಾಘವೇಂದ್ರ) ಉದ್ಘಾಟಿಸಿದರು.
ಮಳಿಗೆಯ ಮಾಲೀಕರಾದ ರಾಹೀಲ್ ಉದ್ಯಾವರ ಅವರು ಕ್ರೀಡಾ ಸಾಮಗ್ರಿಗಳ ಮಾರಾಟ ಉದ್ದೇಶದಿಂದ ಈ ಮಳಿಗೆಯನ್ನು ಆರಂಭಿಸಿದ್ದಾರೆ. ಕ್ರೀಡಾಪಟುಗಳು, ಯುವಜನರು ಹಾಗೂ ಕ್ರೀಡಾಭಿಮಾನಿಗಳಿಗೆ ಅನುಕೂಲವಾಗುವಂತೆ ಉದ್ಯಾವರದಲ್ಲಿ ಹೊಸ ಕ್ರೀಡಾ ಮಳಿಗೆ ಕಾರ್ಯಾರಂಭ ಮಾಡಿದೆ.
ಉದ್ಯಾವರದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಸಮೀಪದ ಸ್ಕೈ ಡೇಲ್ ಕಟ್ಟಡದ ಮಳಿಗೆ ಸಂಖ್ಯೆ 3ರಲ್ಲಿ ಆರ್ ಸ್ಪೋರ್ಟ್ಸ್ ಕಾರ್ಯನಿರ್ವಹಿಸಲಿದೆ. ಸ್ಥಳೀಯ ಕ್ರೀಡಾಪ್ರೇಮಿಗಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಮಳಿಗೆ ಆರಂಭಿಸಲಾಗಿದೆ.
ವಿಳಾಸ: ಆರ್ ಸ್ಪೋರ್ಟ್ಸ್, ಮಳಿಗೆ ಸಂಖ್ಯೆ 3, ಸ್ಕೈ ಡೇಲ್ ಕಟ್ಟಡ, ಗುಡ್ಡೆಅಂಗಡಿ, ಉದ್ಯಾವರ, ಉಡುಪಿ.
ಸಂಪರ್ಕ: 8105973982, 8088849725

