×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ ಉಡುಪಿ ಜಿಲ್ಲಾಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ

ಅದಮಾರು ಪುರ್ಣಪ್ರಜ್ಙ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಉಡುಪಿ ಜಿಲ್ಲಾಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ನೆರವೇರಿತು. ಪಂದ್ಯಾಕೂಟವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕೆ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಗೆಲುವು ನಮ್ಮ ಕಡೆಗೆ ಒಲಿದು ಬರುತ್ತದೆ ಎಂದ ಅವರು, ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಅಂತರಾಷ್ಟ್ರೀಯ ತ್ರೋಬಾಲ್‌ನಲ್ಲಿ ಚಿನ್ನದ ಪದಕ ವಿಜೇತೆ ದೈಹಿಕ ಶಿಕ್ಷಕಿ ಶ್ರೀಮತಿ ಮಮತಾ ನವೀನ್ ಸಹಿತ ಗಣ್ಯರನ್ನು ಸನ್ಮಾನಿಲಾಯಿತು. ಕ್ರಿಡಾ ಕೂಟದಲ್ಲಿ ೭ ತಾಲೂಕಿನ ಬಾಲಕ ಮತ್ತು ಬಾಲಕಿಯರ ಒಟ್ಟು ೧೪ ತಂಡ ಭಾಗವಹಿಸಿದೆ. ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಯ ಸಿ ಕೋಟ್ಯಾನ್, ದೈಹಿಕ ಶಿಕ್ಷಕಿ ಶ್ರೀಮತಿ ಮಮತಾ ಸಂತೋಷ್ ಜೆ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ನಾಗರತ್ನ ರಾವ್, ಧ್ಯುಮಣಿ ಆರ್ ಭಟ್, ಪ್ರಸನ್ನ ಕುಮಾರ್ ಸಂಪತ್ ಜೀವನ್ ಕುಮಾರ್ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ಶ್ರೀಮತಿ ಮಮತಾ ನವೀನ್ ಸನ್ಮಾನ ನಾಗರಾಜ್ ಶೆಟ್ಟಿ, ಸುದರ್ಶನ್ ವೈ ಎಸ್ ಮತ್ತಿತರರು ವೇದಿಕೆಯಲ್ಲಿದ್ದರು. ದೇವಿಪ್ರಸಾದ್ ಬೆಳ್ಳಿ ಬೆಟ್ಟು ನಿರೂಪಿಸಿದರು.

 

Leave a Reply

Your email address will not be published. Required fields are marked *