×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ : ಸೆ.11-13 ಬೃಹತ್ ಆಹಾರ, ಗೃಹ ಉತ್ಪನ್ನ ಮಾರಾಟ ಮೇಳ

ಕುಂದಾಪುರ, ಓಂಕಾರ್‌ಕಾಸ್‌ಟ್ಯೂಮ್ ಮತ್ತು ಕಲಾ ಸಂಗಮ ಪಡುಬಿದ್ರಿ, ರೋಟರಿ ಕ್ಲಬ್ ಪಡುಬಿದ್ರಿಯ ಜಂಟಿ ಆಶ್ರಯದಲ್ಲಿ ಸೆ. 11ರಿಂದ 13ರ ವರೆಗೆ ಇಲ್ಲಿನ ಬಂಟರ ಭವನದಲ್ಲಿ ಬೃಹತ್ ಆಹಾರ ಮತ್ತು ಗೃಹ ಉತ್ಪನ್ನ ಮಾರಾಟ ಮೇಳ ಜರಗಲಿದೆ. ಸವಿರುಚಿ, ಸವಿರುಚಿ, ವೈವಿದ್ಯಮಯ ಆಹಾರದ ಸ್ವಾದವನ್ನು ಸವಿಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸ್ವದೇಶೀ ಉದ್ಯಮ ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲೈವ್ ಹಲಸಿನ ಹಣ್ಣಿನ ಜಿಲೇಬಿ, ಮಾವಿನ ಹೋಳಿಗೆ, ಹಲಸಿನ ಹೋಳಿಗೆ, ಮನೆಯಲ್ಲೇ ತಯಾರಿಸಿದ ಸ್ವಾದಿಷ್ಟ ಉಡುಪಿ ಉಪ್ಪಿನಕಾಯಿ, ಹಪ್ಪಳ, ಮಕ್ರೂಮ್ ಹಾಗೂ ಪನ್ನೀರ್‌ಬಿರಿಯಾನಿ ಮತ್ತು ನೈಸರ್ಗಿಕ ಐಸ್‌ಕ್ರೀಮ್‌ಇದರೊಂದಿಗೆ ಮೈಸೂರ್‌ಸಿಲ್ಕ್ ಸೀರೆಗಳು, ಉತ್ಪನ್ನಗಳು, ಹಳೆ ರೇಷ್ಮೆ(ಜರಿ) ಸೀರೆಗಳನ್ನು ನೀಡಿ ತತ್‌ಕ್ಷಣ ಹಣ ಪಡೆಯುವ ಅವಕಾಶದೊಂದಿಗೆ ಆಯುರ್ವೇದ ಮದ್ದುಗಳು, ಚನ್ನಪಟ್ಟಣದ ಗೊಂಬೆಗಳು, ಅಲ್ಲಂಕಾರಿಕ ಮಣ್ಣಿನ ಮಡಕೆ, ಮಿಲಯ್ ಕತ್ತಿ, ಮಣ್ಣಿನ ಆಭರಣಗಳು ಹಾಗೂ ಅಪರೂಪದ ಹಣ್ಣು ಮತ್ತು ಹೂವಿನ ಕಸಿ ಗಿಡಗಳು ತರಕಾರಿ ಬೀಜಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿರಲಿದೆ ಎಂದು ಸಂಘಟಕರು ತಿಳಿಸಿದಾರೆ

Leave a Reply

Your email address will not be published. Required fields are marked *