ಸಮಾಜಮುಖಿ ಕಾರ್ಯ ಹಾಗೂ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ‘ಕುಶಲ ಶೇಖರ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್’ ಮತ್ತೊಂದು ಪ್ರಶಂಸನೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಶೇಖರ ಶೆಟ್ಟಿ ಇಂಟರ್‌ನ್ಯಾಶನಲ್ ಆಡಿಟೋರಿಯಂ ಹಾಗೂ ಕುಶಲ ಶೇಖರ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ ಗೌರವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಕುಶಲ ಶೇಖರ್ ಶೆಟ್ಟಿ ಸಭಾಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಳತ್ತೂರು ಶೇಖರ ಶೆಟ್ಟಿ ಅವರು 15 ವರ್ಷಗಳಿಂದ ತಮ್ಮ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅವರಿಂದಪ್ರೋತ್ಸಾಹ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಇದು ಸಮಾಜಕ್ಕೆ ಮಾದರಿ ಕಾರ್ಯಕ್ರಮ ಎಂದರು.

ಕಾಪು – ಕಳತ್ತೂರು ಪರಿಸರದ ಸಮಾಜ ಸೇವಕ ಮತ್ತು ಉಡುಪಿ ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷಕಳತ್ತೂರು ದಿವಾಕರ ಬಿ. ಶೆಟ್ಟಿ ಹಾಗೂ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ 11 ವರ್ಷದ ಬಾಲಕಿ, ನಾಲ್ಕು ರಾಜ್ಯಗಳಲ್ಲಿ ಆರು ಭಾಷೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ ಅವರನ್ನು ಸಮ್ಮಾನಿಸಲಾಯಿತು. ಕಳತ್ತೂರು ಹಾಗೂ ಆಸುಪಾಸಿನ ಶಾಲಾ-ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದ 19 ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ನೀಡಿ ಅಭಿನಂದಿಸಲಾಯಿತು.

ಕುಶಲ ಶೇಖರ್ ಶೆಟ್ಟಿ ಆಡಿಟೋರಿಯಂನ ಮಾಲಕ ಕಳತ್ತೂರು ಶೇಖರ ಬಿ. ಶೆಟ್ಟಿ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರುಹೆಗ್ಡೆ ಸಾಯಿರಾಧ ಗ್ರೂಪ್‌ನ ಆಡಳಿತ ನಿರ್ದೇಶಕ ಮನೋಹರ್.ಎಸ್. ಶೆಟ್ಟಿ ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಎಸ್. ಶೆಟ್ಟಿ ಪಿಡಿಒ ರಾಜೇಶ್ ಶೆಣೈ, ಉದ್ಯಮಿ ರವೀಂದ್ರ ಆಳ್ವ ಅನಿವಾಸಿ ಭಾರತೀಯ ಉದ್ಯಮಿ ಪ್ರದೀಪ್ ಶೆಟ್ಟಿ ಕುಶಲ ಶೇಖರ್ ಶೆಟ್ಟಿ ಕುಶಲ ಭುಜಂಗ ಶೆಟ್ಟಿ ಪ್ರೇಮ ಸುಂದರ ಶೆಟ್ಟಿ ಆನಂದಿ ವಾಸು ಶೆಟ್ಟಿ ಅಮರನಾಥ ಶೆಟ್ಟಿ ನಯನ ಎಸ್. ಶೆಟ್ಟಿ ಉಜ್ವಲ್ ಶೇಟ್ಟಿ ರೋಶಿನಿ ಶೆಟ್ಟಿಅಂಚೆ ಇಲಾಖೆ ಪುತ್ತೂರು ವಿಭಾಗದ ನಿವೃತ್ತ ಹಿರಿಯ ಅಧೀಕ್ಷಕ ನವೀನ್ ಚಂದರ್, ಕುತ್ಯಾರು ಉಪಸ್ಥಿತರಿದ್ದರು.
ಟ್ರಸ್ಟಿಚಾಂದಿನಿ ಉಜ್ವಲ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಉದಯ ಕುಮಾರ್ ವಂದಿಸಿದರು. ಉಪನ್ಯಾಸಕಿ ಸುಮನಾ ದೇವಾಡಿಗ ಸಮ್ಮಾನಿತರನ್ನು ಪರಿಚಯಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು. ಕಾಪು ಗ್ಯಾವಿಟಿ ಡಾನ್ಸ್ ಕ್ರೀವ್ ತಂಡ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

