×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ ಟೋಲ್ ವಿರುದ್ದದ ಬೃಹತ್ ಪ್ರತಿಭಟನೆಯ ಪೋಸ್ಟರ್ ಬಿಡುಗಡೆ


ಪಡುಬಿದ್ರಿ ಜು,27:- :ಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಸ್ಥಳೀಯರ ಹಕ್ಕುಗಳ ರಕ್ಷಣೆಗಾಗಿ ಆಗಸ್ಟ್ 1 ರಂದು ಬೆಳಿಗ್ಗೆ 10.00 ಗಂಟೆಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ಹೆಜಮಾಡಿ ಟೋಲ್ ಬಳಿ  ನಡೆಯಲಿರುವ ಬೃಹತ್ ಟೋಲ್ ಹೋರಾಟದ ಕುರಿತು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ  ಇಂದು ನಡೆದ *ಪೂರ್ವಭಾವಿ ಸಭೆ ಹಾಗೂ ಪೋಸ್ಟರ್ ಬಿಡುಗಡೆ* ಸಮಾರಂಭವು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು..
✅ *ಬೃಹತ್ ಟೋಲ್ ಹೋರಾಟದ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.*
✅ *ಪಡುಬಿದ್ರಿ ಜಿಲ್ಲಾ ಪಂಚಾಯತ್ ಭಾಗದ ಸ್ಥಳೀಯ ವಾಹನಗಳಿಗೆ ಶಾಶ್ವತ ಟೋಲ್ ವಿನಾಯಿತಿ ಹಾಗೂ ಸ್ಥಳೀಯ ಪಾಸ್ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಹೋರಾಟದಲ್ಲಿ ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸುವಂತೆ  ನಿರ್ಧರಿಸಲಾಯಿತು.*
✅ *PWD ರಸ್ತೆಯಲ್ಲಿರುವ ಅನಧಿಕೃತ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಯಿತು.*
✅ *ಹೋರಾಟದ ದಿನ ಪ್ರತಿಯೊಂದು ಬೂತ್‌ನಿಂದ ಕನಿಷ್ಠ 50 ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.*
✅ *ಈಗಾಗಲೇ ಹೆಜಮಾಡಿ , ಎರ್ಮಾಳು , ಪಲಿಮಾರು ಹಾಗೂ ಪಡುಬಿದ್ರಿ ಭಾಗದ ಸಂಘ–ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಯುವ ಸಂಘಟನೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುತ್ತಾರೆ.*
👥 ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷರಾದ ವ್ಯೆ ಸುಕುಮಾರ್  ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್‌ಚಂದ್ರ ಜೆ. ಶೆಟ್ಟಿ , ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಧೀರ್ ಕರ್ಕೇರ   ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜ್ಮಾಡಿ ಪ್ರಮುಖರಾದ ನವೀನ್ ಎನ್. ಶೆಟ್ಟಿ,ಮಹಮ್ಮದ್ ನಿಯಾಜ್ ,ಸುಚರಿತಾ ಅಮೀನ್ ,ಅಶೋಕ್ ಸಾಲಿಯಾನ್ ,ಹಸನ್ ಬಾವ,ವಿಶಾಲ್ ವಿ. ಬಂಗೇರ,
ದೀಕ್ಷಾ ಕೆ.ಹೆಜಮಾಡಿ ,ಅಬ್ದುಲ್ ಮಜೀದ್ ,ಸುನಂದಾ ಸಾಲಿಯಾನ್, ಅಬ್ದುಲ್ ಖಾದರ್,ಸುಬ್ಬಯ್ಯ ಮುಲ್ಯ ರಿಫಾನ್, ನಾರಯಾಣ್ ಕಲ್ಲಟ್ಟೆ , ಲಿಯಾಖಾತ್ ಮುನ್ನ ,ವಿಠಲ್ ಮಾಸ್ಟರ್, ಕೀರ್ತಿ ಕುಮಾರ್ , ಮುಬೀನಾ ಬೇಗಮ್ ,ತಸ್ಲೀನ್ ಆರಾ, ಜ್ಯೋತಿ ಮೆನನ್ ,ಅಬ್ದುಲ್ ರಜಾಕ್,ಮುಯ್ಯಿದ್ದೀನ್ ಪಿ.ಕೆ. ಕಿರಣ್ ಪ್ರತಾಪ್,  ಉಷಾ , ಹಕೀಮ್,  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
*ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೀಜ್ ಹುಸೇನ್  ಸ್ವಾಗತಿಸಿ , ಪ್ರಧಾನ ಕಾರ್ಯದರ್ಶಿ  ಸಂತೋಷ್ ಪಡುಬಿದ್ರಿ* ವಂದಿಸಿದರು.

Leave a Reply

Your email address will not be published. Required fields are marked *