×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು ಕಾರ್ಯಕ್ರಮವನ್ನು ಮಾಜಿ ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ಪ್ರಕೃತಿಯ ಮಡಿಲಲ್ಲಿ ಮಳೆಗಾಲದ ಸೌಂದರ್ಯದ ನಡುವೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಎಲ್ಲೆಡೆ ಗಮನ ಸೆಳೆಯುತ್ತಿದೆ. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಮರೆಯಾಗುತ್ತಿರುವ ತುಳು ಸಂಸ್ಕೃತಿಯನ್ನು ಮರುಕಳಿಸುವಂತೆ ಮಾಡಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.. ಈ ‘ಆಟಿಡೊಂಜಿ ದಿನ’ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಣ್ಣ ಪ್ರಯತ್ನ ಹಜಮಾಡಿ ಗ್ರಾಮೀಣ ಕಾಂಗ್ರೆಸ್ ಮಾಡುತ್ತಿದೆ ಎಂದು ತಿಳಿಸಿದರು

ದಯಾನಂದ ಕತ್ತಲ್ ಸರ್ ಮಾಜಿ ಅಧ್ಯಕ್ಷರು ತುಳು ಸಾಹಿತ್ಯ ಅಕಾಡೆಮಿ ಕರ್ನಾಟಕ ಸರಕಾರ ಇವರು ಮಾತನಾಡಿ ಒಂದು ಕಾಲದಲ್ಲಿ ‘ಆಟಿ’ ಎಂದರೆ ಕಷ್ಟದ, ಮಳೆಯ, ರೋಗರುಜಿನಗಳ ತಿಂಗಳಾಗಿತ್ತು. ಕೃಷಿ ಕೆಲಸ ಮುಗಿದು, ಕೈಯಲ್ಲಿ ಧಾನ್ಯವಿಲ್ಲದೆ ಜನ ಕಷ್ಟಪಡುತ್ತಿದ್ದ ಕಾಲವದು. ಆದರೆ ನಮ್ಮ ಹಿರಿಯರು ಆ ಕಷ್ಟದ ಕಾಲದಲ್ಲೂ ಪ್ರಕೃತಿಯನ್ನು ಪ್ರೀತಿಸುವುದನ್ನು ಬಿಡಲಿಲ್ಲ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು, ತರಕಾರಿಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಂಡರು.
​”ಆಟಿ ತಿಂಗಳು ಕೇವಲ ಕಷ್ಟದ ದಿನಗಳಲ್ಲ, ಅದು ನಮ್ಮ ಸಹನೆ, ಆರೋಗ್ಯ ಮತ್ತು ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ನೆನಪಿಸುವ ಪವಿತ್ರ ಮಾಸ.”ಎಂದು ತಿಳಿಸದರು

ಪ್ರಮೋದ್ ಚಂದ್ರ ಅಧ್ಯಕ್ಷರು ಹೆಜಮಾಡಿ ಗ್ರಾಮೀಣ ಸಮಿತಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ವೈ ಸುಕುಮಾರ್ ಶಾಂತಲಾತಾ ಶೆಟ್ಟಿ ಮೋಹನ್ ದಾಸ್ ಅಬ್ದುಲ್ ಆಝೀಜ್ ಹೆಜಮಾಡಿ ಸೌಜನ್ ಕುಮಾರ್ ದಯಾನಂದ ಹರಿಶ್ಚಂದ್ರ ಮೆಂಡನ್ ದೀಕ್ಷಾ ಕೆ ವಿಶಾಲ್ ವಿ ಬಂಗಾರ ಸುಧೀರ್ ಕರ್ಕೇರ ಶಿವರಾಮ್ ಶೆಟ್ಟಿ ನವೀನ್ ಶೆಟ್ಟಿ ರಮೀಝ್ ಹುಸೈನ್ ಸುಚರಿತ ಸೈಯದ್ ಅಲಿ ಅಶ್ವಿನಿ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *