ಇಂದಿನ ಆಧುನಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಾಟೆ ಮತ್ತು ಕಿಕ್ ಬಾಕ್ಸಿಂಗ್‌ನಂತಹ ಸಮರ ಕಲೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ರಾಜೇಶ್ ಶೆಟ್ಟಿ ಬಿರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ಬುಡೋಕಾನ್ ಕರಾಟೆ & ಸ್ಪೋರ್ಟ್ಸ್ ಅಸೋಸಿಯೇಶನ್ ಕರಾಟೆ ಬುಡೋಕಾನ್ ಫೆಡರೇಷನ್ ಇಂಟರ್‌ನ್ಯಾಷನಲ್ ಇದರ ಅಂಗ ಸಂಸ್ಥೆ) ಬುಡೋಕಾನ್ ಕರಾಟೆ & ಸ್ಪೋರ್ಟ್ಸ್ ಅಸೋಸಿಯೇಶನ್ ಕರ್ನಾಟಕ ವತಿಯಿಂದ ಆಯೋಜಿಸಲಾಗಿದ್ದ “ನೂತನ ಕರಾಟೆ & ಕಿಕ್ ಬಾಕ್ಸಿಂಗ್ ತರಗತಿಗಳ” ಭವ್ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಕರಾಟೆ ಎನ್ನುವುದು ಕೇವಲ ದಾಳಿ ಮಾಡುವ ಕಲೆಯಲ್ಲ, ಅದು ಆತ್ಮರಕ್ಷಣೆ ಮತ್ತು ಜೀವನದಲ್ಲಿ ಶಿಸ್ತನ್ನು ಕಲಿಸುವ ದಾರಿಯಾಗಿದೆ. ವಿಶೇಷವಾಗಿ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಮತ್ತು ಯುವ ಪೀಳಿಗೆಗೆ ಆತ್ಮರಕ್ಷಣೆ ತಂತ್ರಗಳ ಜ್ಞಾನ ಇರುವುದು ಅತ್ಯಗತ್ಯ” ಎಂದು ಒತ್ತಿ ಹೇಳಿದರು.

ಸುದೀರ್ ಪ್ರಭು, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬುಡೋಕಾನ್ ಸ್ಪೋಟ್ಸ್ ಕರಾಟೆ, ಅಸೋಸಿಯೇಶನ್ ಇವರು ಮಾತನಾಡಿ ನಮ್ಮ ಅಸೋಸಿಯೇಶನ್ ಕರಾಟೆ ಬುಡೋಕಾನ್ ಫೆಡರೇಷನ್ ಇಂಟರ್‌ನ್ಯಾಷನಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀ ಯ ಮಟ್ಟದ ಗುಣಮಟ್ಟದ ತರಬೇತಿ ಸಿಗಲಿದೆ. ಇದು ಕ್ರೀಡಾಪಟುಗಳು ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ: ಕಿಕ್ ಬಾಕ್ಸಿಂಗ್ ಮತ್ತು ಕರಾಟೆ ಅಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಮೊಬೈಲ್ ಮತ್ತು ಡಿಜಿಟಲ್ ಜಗತ್ತಿಗೆ ದಾಸರಾಗುತ್ತಿರುವ ಇಂದಿನ ಮಕ್ಕಳಿಗೆ ಇಂತಹ ಕ್ರೀಡೆಗಳು ಹೊಸ ಚೈತನ್ಯ ನೀಡಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು ವಾಮನ್ ಪಾಲನ್ಕಾರ್ಯಕ್ರಮದ ಆಯೋಜಕರುಅಧ್ಯಕ್ಷರು ಕರ್ನಾಟಕ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್

ಈ ಸಂದರ್ಭದಲ್ಲಿ : ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಅಧ್ಯಕ್ಷರು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ.ಈ ಸಂದರ್ಭದಲ್ಲಿ : ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಅಧ್ಯಕ್ಷರು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ. ಶ್ರೀ ದೀಪಕ್, ಮ್ಯಾಗ್ನಸ್ ಆರ್ಕೆಡ್, ಬ್ರಹ್ಮಾವರ. ಶ್ರೀ ಸುದೀರ್ ಪ್ರಭು, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬುಡೋಕಾನ್ ಸ್ಪೋಟ್ಸ್ ಕರಾಟೆ, ಅಸೋಸಿಯೇಶನ್. : ಶ್ರೀ ಸುಶಾಂತ್, ಎಸ್ ಬಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರು. : ಶ್ರೀ ಶಾಂತರಾಜ ಬಿ.ಕೆ., ಸಹಾಯಕ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ. : ಶ್ರೀ ಜಯಕರ ಐರೋಡಿ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ. : ಶ್ರೀ ಮಧುಸೂಧನ್ ಮಲ್ಪೆ, ಪ್ರವರ್ತಕರು ಮಯೂರ ಪ್ರಿಂಟ್ ಪ್ಲೆಕ್ಸ್ ಬ್ರಹ್ಮಾವರ.

: ಶ್ರೀ ಉಮೇಶ್ ಪೂಜಾರಿ ಬ್ರಹ್ಮಾವರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಧ್ಯಕ್ಷರು ಸೇವಾ ದಳ, ಬ್ರಹ್ಮಾವರ. : ಶ್ರೀ ಅಶೋಕ್ ಕುಲಾಲ್, ವಿ ಕೆ ಬುಡೋಕಾನ್ ಸೆಲ್ಸ್ ಡಿಫೆನ್ಸ್ (8) ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ. : ಶ್ರೀ ಕೆ ಪಿ ಇಬ್ರಾಹಿಂ ಮಟ್ಟಾಡಿ, ಉದ್ಯಮಿ . ಕುಶಾಲ್ ಜತ್ತನ್. ರವಿ ಸಾಲಿಯನ್ ಸಂಸ್ಥೆಯ ಪ್ರಮುಖರು, ಕರಾಟೆ ತರಬೇತುದಾರರು, ಪೋಷಕರು ಹಾಗೂ ಕರಾಟೆ ಪಟುಗಳು ಉಪಸ್ಥಿತರಿದ್ದರು.


