×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಏಪ್ರಿಲ್ 4 ರಂದು -ಕಟಪಾಡಿಯಲ್ಲಿ ಲೊಂಬಾರ್ಡ್ (ಮಿಷನ್ ) ಆಸ್ಪತ್ರೆ ನೂತನ ಹೆಲ್ತ್ ಸೆಂಟರ್ ಉದ್ಘಾಟನೆ

ಉಡುಪಿ: ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ, ಉಡುಪಿ, ಕಟಪಾಡಿಯಲ್ಲಿ ಲೊಂಬಾರ್ಡ್ಮಿ ಮಿಷನ್‌ ಆಸ್ಪತ್ರೆಯ ಹೊಸ ಆರೋಗ್ಯ ಕೇಂದ್ರವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ. ಇದರ ಉದ್ಘಾಟನಾ ಸಮಾರಂಭವು ಏ. 4 ಶನಿವಾರ ಬೆಳಿಗ್ಗೆ 10:30ಕ್ಕೆ ಕಟಪಾಡಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಈ ಹೊಸ ಆರೋಗ್ಯ ಕೇಂದ್ರವು ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ಮತ್ತು ಮಾನವೀಯ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಸೇವೆಯನ್ನು ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ (KSD) ಬಿಷಪ್ ಆಗಿರುವ ರೈಟ್ ರೆ ವೆ. ಹೇಮಚಂದ್ರ ಕುಮಾ‌ರ್ ಅವರು ಆಶೀರ್ವದಿಸಿ ಲೋಕಾರ್ಪಣೆ ಮಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು ಹಾಗೂ ಮಾಜಿ ಶಾಸಕರು, ಕಾಪು ,ಫಾ. ಫೌಸ್ಟಿನ್ ಲೂಕಸ್ ಲೋಬೋ, ನಿರ್ದೇಶಕರು FMCI ಹಾಗೂ ಆಡಳಿತಾಧಿಕಾರಿ FMHMC & H ,ಡಾ.ಎ. ರವೀಂದ್ರನಾಥ ಶೆಟ್ಟಿ, ಸರಸ್ಕೃತಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್, ಕಟಪಾಡಿ,ಶ್ರೀಮತಿ ಪ್ರಭಾ ಬಿ. ಶೆಟ್ಟಿ, ಮಾಜಿ ಅಧ್ಯಕ್ಷರು, ಕಟಪಾಡಿ ಗ್ರಾಮ ಪಂಚಾಯತ್ ,ಶ್ರೀ ಇಕ್ವಾಲ್ ಶಂಸುದ್ದೀನ್, ಉದ್ಯಮಿ, ಕಟಪಾಡಿ, ಪ್ರಶಾಂತ್ ಜತನ್ನ ನಿರ್ದೇಶಕರು, ಕ್ರಿಶ್ಚಿಯನ್ ಡೆವಲಪ್ಮೆಂಟ್ ಕಾರ್ಪೊರೇಶನ್, ಕರ್ನಾಟಕ ಸರ್ಕಾರ , ರೆವೆ. ಐವಾನ್ ಡಿ.ಸೋನ್ಸ್, ಖಜಾಂಚಿ, ಸಿ.ಎಸ್.ಐ-KSD,ರೆವೆ. ಕಿಶೋರ್ ಕುಮಾರ್, ಏರಿಯಾ ಚೇರ್ಮನ್, ಉಡುಪಿ, ಸಿ.ಎಸ್.ಐ – KSD, ರೆವೆ. ಅಕ್ಷಯ್ ಅಮ್ಮಣ್ಣ, ಪ್ರೆಸ್ಬಿಟರ್-ಇನ್-ಚಾರ್ಜ್, ಸಿ.ಎಸ್.ಐ ಕ್ರೈಸ್ಟ್ ಚರ್ಚ್ ಅಂಬಾಡಿ,ಶ್ರೀ ಸ್ಟೀಫನ್ ಕರ್ಕಡ, ಸಹ ಕಾರ್ಯದರ್ಶಿ, ಸಿ.ಎಸ್.ಐ-KSD ,ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸುಶಿಲ್ ಜತನ್ನ, ನಿರ್ದೇಶಕರು, ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ, ಉಡುಪಿ ವಹಿಸಲಿದ್ದಾರೆ.

ಸಮುದಾಯ ಆರೋಗ್ಯದತ್ತ ಬದ್ಧತೆ:ಲೊಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರವು ಮುಖ್ಯ ಆಸ್ಪತ್ರೆಯ ವ್ಯಾಪ್ತಿಯನ್ನು ಮೀರಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಜನತೆಗೆ ತಲುಪಿಸುವ ಆಸ್ಪತ್ರೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೇಂದ್ರವು ಪ್ರಾಥಮಿಕ ಆರೋಗ್ಯ ಸೇವೆಗಳ ಅಗತ್ಯಗಳನ್ನು ಪೂರೈಸಲು, ರೋಗ ಬರದಂತೆ ತಡೆಗಟ್ಟುವ ಆರೈಕೆಯನ್ನು ಉತ್ತೇಜಿಸಲು ಹಾಗೂ ಗ್ರಾಮೀಣ ಸಮುದಾಯಗಳನ್ನು ವಿಶೇಷ ವೈದ್ಯಕೀಯ ಸೇವೆಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವುದನ್ನು ಉದ್ದೇಶಿಸಿದೆ ಎಂದರು. ರೋಹಿ ರತ್ನಾಕರ್ , ಕಾವ್ಯಶ್ರೀ ಶೆಟ್ಟಿ ಲೀನಾ ಪ್ರಭಾವತಿ , ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *