×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೇ 22 ಆನೆಗುಂದಿ ಶ್ರೀಗಳವರ ಪಟ್ಟಾಭಿಷೇಕ ವರ್ಧುಂತಿ ಚಂಡಿಕಾ ಯಾಗ, ರಾಷ್ಟ್ರಿಯ ಪ್ರಶಸ್ತಿ ಪ್ರದಾನ

ಆನೆಗುಂದಿ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ 15ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ಮೇ 22ರಂದು ಪಡುಕುತ್ಯಾರಿನಲ್ಲಿ ಜರಗಲಿದೆ ಬೆಳಗ್ಗೆ ಜಗದ್ಗುರುಗಳಿಂದ ಕಟಪಾಡಿ ಶ್ರೀ ಮಹಾಸಂಸ್ಥಾನದಲ್ಲಿ ಪಟ್ಟಾಭಿಷೇಕ ವರ್ಧಂತಿ ಸಂಬಂಧಿತ ವಿವಿಧ ವೈದಿಕ ವಿಧಿ ವಿಧಾನಗಳು ನಡೆಯಲಿವೆ. ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಪಾದಪೂಜೆ, ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥ ರಾಗಿರುವ ದೇವಸ್ಥಾನಗಳ ಧರ್ಮದರ್ಶಿ ಗಳವರಿಂದ, ಆಯಾ ದೇವಸ್ಥಾನಗಳ ವತಿಯಿಂದ ಜಗದ್ಗುರುಗಳವರಿಗೆ ಫಲನ್ಯಾಸ, ದೇವಸ್ಥಾನಗಳಲ್ಲಿ ವಾರ್ಷಿಕ ಸಂಗ್ರಹಿತ ಗುರುಕಾಣಿಕೆ ಸಮರ್ಪಣೆ, ಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳು ನಡೆಯಲಿವೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ವಡೇರಹೋಬಳಿ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಕೆ.ಪಿ.ಉಮಾಪತಿ ಆಚಾರ್ಯ, ಶಿಲ್ಪಿ ಜಯಣ್ಣ ಆಚಾರ್ಯ ಚಿಕ್ಕಮಗಳೂರು, ಸ್ಥಪತಿ ಡಾ.ಕೆ. ದಕ್ಷಿಣಾಮೂರ್ತಿ ಚೆನ್ನೈ ಅವರುಗಳಿಗೆ ಸಾಹಿತ್ಯ ಸರಸ್ವತೀ ಸಮ್ಮಾನ್, ಮಹಾಶಿಲ್ಪಿ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ, ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ಹಾಗೂ ವಾಸ್ತು ಪಿತಾಮಹನ್ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಸಚಿನ್, ಗಿರ್ಗಾಂವಕರ್ ವಿಜಯಪುರ, ಸುಬ್ರಾಯ ಆಚಾರ್ಯ ಇನ್ನಂಜೆ, ಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ, ವಿದ್ವಾನ್ ರಾಜಶೇಖರ ఎలా ಭೀಮಾಚಾರ್ ಬೆಂಗಳೂರು ಅವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂದು ಆನೆಗಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್ ಕಂಬಾರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *