
ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿರುವ ವಿನಯ್ ಕುಮಾರ್ ಸೊರಕೆ 10 ಗಂಟೆಗೆ ಕಾಪು ಲಕ್ಷ್ಮಿ ಜನಾರ್ಧನ ದೇವಸ್ಥಾನದಿಂದ ಬೃಹತ್ ಶೋಭಾ ಯಾತ್ರೆ ಕಾಪು ರಾಜೀವ ಭವನದ ಮುಂಭಾಗದಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಾರ್ವಜನಿಕ ಸಭೆ ನಂತರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಪು ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದಂತಹ ಕ್ಷೇತ್ರ 2013ರಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹೋರಾಟದ ಹಿನ್ನೆಲೆಯಲ್ಲಿ ನನಗೆ ಶಾಸಕನಾಗಲು ಮತ್ತು ಸಚಿವನಾಗಲು ಅವಕಾಶ ಸಿಕ್ಕಿತು ಕಳೆದ ಐದು ವರ್ಷದ ಹಿಂದೆ ಈ ಕ್ಷೇತ್ರದಲ್ಲಿ ಇತಿಹಾಸದಲ್ಲಿ ಆಗದಂತಹ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಕಾಪುವಿನ ಜನತೆ ನನಗೆ ಸಂಪೂರ್ಣ ಸಹಕಾರ ನೀಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ದೇವಿ ಪ್ರಸಾದ್ ಶೆಟ್ಟಿ ಎಂ ಎ ಗಾಫುರ್ ನವೀನ್ ಚಂದ್ರ ಶೆಟ್ಟಿ ವೈ ಸುಕುಮಾರ್ ಉಸ್ಮಾನ್ ಉಪಸ್ಥಿರಿದ್ದರು

