×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಆಧುನಿಕ ತಂತ್ರಜ್ಞಾನ ಛಾಯಾಗ್ರಹಕರಿಗೆ ಸವಾಲು ಎಸ್ ಕೆ ಪಿ ಎ ಪದಗ್ರಹಣ ಸಮಾರಂಭದಲ್ಲಿ ಹರಿರಾಮ್ ಶಂಕರ್

ಹಿರಿಯಡಕ, ಫೆ. 16: ಹೊಸ ತಂತ್ರಜ್ಞಾನಗಳಿಗೆ ಛಾಯಾಗ್ರಹಕರು ಹೊಂದಿಕೊಳ್ಳಬೇಕಾಗಿದೆ. ಇಂದಿನ ಏಐ ತಂತ್ರಜ್ಞಾನ ಛಾಯಾಗ್ರಾಹಕರಿಗೆ ಸವಾಲಾಗಿದೆ. ಛಾಯಾಗ್ರಾಹಕರು ತಮ್ಮ ಕಾರ್ಯಕ್ರಮವನ್ನು ಕುಟುಂಬದೊಂದಿಗೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಇಲಾಖೆಯಿಂದ ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಅವರು ಶನಿವಾರ ಹಿರಿಯಡಕದ ರಜತ ರಶ್ಮಿ ಸಭಾಭವನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಉಡುಪಿ ವಲಯದ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷ ಸುಧೀರ್ ಎಂ ಶೆಟ್ಟಿ ನಿಯೋಜಿತ ಅಧ್ಯಕ್ಷ ದಿವಾಕರ್ ಹಿರಿಯಡಕ ಇವರಿಗೆ ಉಡುಪಿ ವಲಯದ ಎರಡು ವರ್ಷದ ಜವಾಬ್ದಾರಿಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಾಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಛಾಯಾಗ್ರಹಣ ಮತ್ತು ಸಂಘಟನೆಗೆ ನೀಡಿದ ಸೇವೆಯನ್ನು ಪರಿಗಣಿಸಿ ಚಂದ್ರಶೇಖರ್ ಹಿರಿಯಡಕ ಮತ್ತು ಗಣೇಶ್ ಕೊರಂಗ್ರಪಾಡಿ ಇವರನ್ನು ಸನ್ಮಾನಿಸಲಾಯಿತು. ಎರಡು ವರ್ಷ ಜಿಲ್ಲಾ ಮತ್ತು ವಲಯಕ್ಕಾಗಿ ದುಡಿದ ದಯಾನಂದ ಬಂಟ್ವಾಳ, ನವೀನ್ ರೈ ಪಂಜಳ, ಕರುಣಾಕರ ಕಾನಂಗಿ, ಸುಧೀರ್ ಎಂ ಶೆಟ್ಟಿ, ರಮೇಶ್ ಭಟ್ ಎಲ್ಲೂರು ಹಾಗೂ ಪ್ರವೀಣ್ ಕೊರೆಯ ಇವರನ್ನು ಗೌರವಿಸಲಾಯಿತು. ಛಾಯಾ ಸುರಕ್ಷ ನಿಧಿಯಿಂದ ಚಿಕಿತ್ಸೆಗಾಗಿ ಶ್ರೀಧರ್ ಉಪ್ಪೂರು ಹಾಗೂ ಪೂರ್ಣಿಮಾ ಶೆಟ್ಟಿಯವರಿಗೆ ಧನ ಸಹಾಯ, ನವೀನ್ ಬಳ್ಳಾಲ್ ಕೊಡ ಮಾಡಿದ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಚ್ ಪಿ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಲಯನ್ ಹರಿಪ್ರಸಾದ್ ರೈ, ಉದ್ಯಮಿ ಪಳ್ಳಿ ನಟರಾಜ ಹೆಗ್ಡೆ, ಜಿಲ್ಲಾ ಸಂಚಾಲಕ ಗೋಪಾಲ್ ಸುಳ್ಯ, ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ ವಾಸುದೇವ ರಾವ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಕೊಡಂಕೂರು, ಉಡುಪಿ ವಲಯ ಗೌರವಾಧ್ಯಕ್ಷ ನವೀನ್ ಚಂದ್ರ ಬಳ್ಳಾಲ್, ನಿಯೋಜಿತ ಗೌರವಾಧ್ಯಕ್ಷ ಯು. ಕೆ ಭಾಸ್ಕರ್ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷ ಸುದೀರ್ ಎಂ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಘವೇಂದ್ರ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಡೊಂಡೇರಂಗಡಿ ವಂದಿಸಿದರು

Leave a Reply

Your email address will not be published. Required fields are marked *