×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಯಂಗ್ ಇಂಡಿಯಾ ಕೇ ಬೋಲ್ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟ ರಾಜ್ಯ ಮಟ್ಟ ಮತ್ತು ರಾಷ್ಟೀಯ ಮಟ್ಟದ ಭಾಷಣ ಸ್ಪರ್ಧೆ

ಯಂಗ್ ಇಂಡಿಯಾ ಕೇ ಬೋಲ್ ಸೀಸನ್ 2.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಶ್ರೀ ಬಿ ವಿ ಶ್ರೀನಿವಾಸ್ ರವರು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ಶ್ರೀ ಮೊಹಮದ್ ಹ್ಯಾರಿಸ್ ನಲಪಾಡ್ ರವರ ಆದೇಶದ ಮೇರೆಗೆ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟ ರಾಜ್ಯ ಮಟ್ಟ ಮತ್ತು ರಾಷ್ಟೀಯ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಈ ಉದ್ದೇಶದಿಂದ ಉಡುಪಿ ವ್ಯಾಪ್ತಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ದೀಪಕ್ ರವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಘೋಷ್ಠಿಯನ್ನು ಕರೆಯಲಾಗಿತ್ತು.ಯಂಗ್ ಇಂಡಿಯಾ ಕೇ ಬೋಲ್ ಭಾಷಣ ಸ್ಪರ್ಧೆಯು ಜಿಲ್ಲಾ ಮಟ್ಟದಲ್ಲಿ ಇದೇ ತಿಂಗಳು ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಅಯ್ಕೆಯಾದ ಹತ್ತು ಜನ ವಿಜೇತರು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ರಾಜ್ಯ ಮಟ್ಟದಲ್ಲಿ ಗೆಲ್ಲುವ ಮೊದಲ ವಿಜೇತರಿಗೆ I phone 13 Pro ಎರಡನೇ ಬಹುಮಾನ i phone 13 ಮತ್ತು ಮೂರನೇ ಬಹುಮಾನ 1+ ಮೊಬೈಲ್ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಅಯ್ಕೆಯಾದ ಮೊದಲ ಹತ್ತು ವಿಜೇತರನ್ನು ದೆಹಲಿಯಲ್ಲಿ ನಡೆಯುವ ರಾಷ್ಟೀಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ.ಈ ಭಾಷಣ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯುವ ಕಾಂಗ್ರೆಸ್ ವಕ್ತಾರರಾಗಿ ಅಯ್ಕೆ ಮಾಡಲಾಗುತ್ತದೆ. ಇಂದಿನ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಸುರಯ್ಯ ಅಂಜುಮ್ ಹಮ್ಮೆದ್ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು  ಯುವ ಕಾಂಗ್ರೆಸ್ ಉಪಾಧ್ಯಕ್ಷರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಚಿರಂಜೀವಿ.ಆರ್ ರಾಜ್ಯ ವಕ್ತಾರರು ಹಾಗೂ ಉಡುಪಿ,ದಕ್ಷಿಣಕನ್ನಡ ಯಂಗ್ ಇಂಡಿಯಾ ಕೆ ಬೋಲ್ ಉಸ್ತುವಾರಿ KPYCC

https://youtu.be/08id7sNY-7A

 

Leave a Reply

Your email address will not be published. Required fields are marked *