ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತ್ರತ್ವದಲ್ಲಿ ಇಂದು ರಾಜ್ಯಾದ್ಯಂತ ರಾಜ್ಯ ಕರುಡು ನಿಯಮಗಳು 2026 ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳ ಪತ್ರ ನೀಡಲು ಕರೆನೀಡಿದ್ದು ಉಡುಪಿಯಲ್ಲಿ ಇಂದು ಉಡುಪಿ ಜಿಲ್ಲಾಕಟ್ಟಡ ಕಾರ್ಮಿಕ ಸಂಘ,ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಸಂಘಗಳು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಕಾರ್ಮಿಕ ಅಧಿಕಾರಿಗಳು ಮತ್ತು ಅಪಾರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮತ್ತು ಕಾರ್ಮಿಕ ಕಾರ್ಯದರ್ಶಿ (ವಿಕಾಸಸೌಧ) ಬೆಂಗಳೂರು ಇವರಿಗೆ ಆಕ್ಷೇಪಣೆ ಪತ್ರ ನೀಡಿದರು.
ಪ್ರಮುಖ ಅಂಶಗಳು
1.ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು
2.ಒಕ್ಕೂಟ ವ್ಯವಸ್ಥೆ ವಿರುದ್ಧ ವಾದ ಸಮವರ್ತಿ ಪಟ್ಟಿಯ ಕಾರ್ಮಿಕರ ಕುರಿತು ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಸಿಮೀತ ಗೊಳಿಸುವ ಪ್ರಯತ್ನ ವನ್ನು ರಾಜ್ಯ ಸರಕಾರ ವಿರೋಧಿಸಬೇಕು.
3.ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದು ಪಡಿಗಳನ್ನು ತಂದು ನಂತರ ನಿಯಮಾವಳಿ ರೂಪಿಸಬೇಕು.
4.ಕರಡು ನಿಯಮಗಳನ್ನು ಕನ್ನಡದ ಲ್ಲಿ ಪ್ರಕಟಿಸಿ ನಂತರ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು.
5 ರಾಜ್ಯ ಸರ್ಕಾರ ಕೂಡಲೇ ಕನಿಷ್ಠ ವೇತನ ಆಧಿಸೂಚನೆ ಹೋರಾಡಿಸಬೇಕು
ಪ್ರತಿಭಟನೆ ಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಡುಪಿ ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷರಾದ ನಳಿನಿ.ಎಸ್,ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್,ಮುಖಂಡರಾದ ವಸಂತಿ,ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ದ ಅಧ್ಯಕ್ಷರಾದ ಸುಭಾಸ್ ನಾಯಕ್,ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ಉಪಾಧ್ಯಕ್ಷ ರಾದ ದಯಾನಂದ ಕೊಟ್ಯಾನ್, ಕೋಶಾಧಿಕಾರಿ ವಾಮನ ಬಂಗೇರ ಮುಖಂಡರಾ ಸರೋಜ.ಎಸ್,ದಯಾನಂದ ಅಮೀನ್, ರಾಮ ಕಾರ್ಕಡ,ನಾಗರಾಜ ಸಾಲಿಗ್ರಾಮ, ಮುರಳಿ,ರಮೇಶ್, ಶ್ರೀ ಧರ ಶೆಟ್ಟಿ, ಅಶೋಕ, ರಂಗನಾಥ, ಚಂದ್ರಯ್ಯ ಪೂಜಾರಿ,ಸಿಐಟಿಯು ಉಡುಪಿ ಮುಖಂಡರಾದ ಮೋಹನ್ ಉಪಸ್ಥಿತರಿದ್ದರು

