×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸುಳ್ಳು ಸುದ್ದಿ ಹಂಚಿದ ಸುನೀಲ್ ಕುಮಾರ್ ಜನತೆಯ ಕ್ಷಮೆಯಾಚಿಸಲಿ: ಶುಭದ್ ರಾವ್

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಕಲಿ ಪತ್ರ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಕೀಳುಮಟ್ಟದ ರಾಜಕೀಯದಿಂದ ಅವರು ರಾಜಕೀಯ ನೈತಿಕತೆ ಕಳೆದುಕೊಂಡಿದ್ದಾರೆ. ಆ ಸ್ಥಾನಕ್ಕೆ ಸಂವಿಧಾನ ನೀಡಿದ ಮಹತ್ತರವಾದ ಹೊಣೆಗಾರಿಕೆಯನ್ನು ಮರೆತು ರಾಜಕೀಯ ಪ್ರೇರಿತ ದುರುದ್ಧೇಶದಿಂದ ಜನರ ಹಾದಿ ತಪ್ಪಿಸುವ ಸುನಿಲ್ ಕುಮಾರ್ ಕಾರ್ಕಳದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಕಾರ್ಕಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.

ಮಂಡ್ಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರಿನಲ್ಲಿ ಅಬಕಾರಿ ಉಪ ಆಯುಕ್ತರನ್ನಾಗಿ ನಿಯೋಜಿಸಲು ಸಿಎಂ ಬರೆದಿದ್ದಾರೆ ಎನ್ನಲಾದ ಪತ್ರವೊಂದನ್ನು ಸುನಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜನರ ಹಾದಿ ತಪ್ಪಿಸುವ ಸಲುವಾಗಿ ತೀರಾ ಕೀಳುಮಟ್ಟದ ರಾಜಕೀಯ ಸಲ್ಲದು. ನಕಲಿ ಪೋಸ್ಟರ್ ಹಂಚುವುದರಿಂದ ತನ್ನ ರಾಜಕೀಯ ನೆಲೆ ಭದ್ರಗೊಳಿಸಬಹುದೆಂಬ ಭ್ರಮೆಯಿಂದ ಹೊರಬಂದು ಶಾಸಕರು ಕಾರ್ಕಳದ ಅಭಿವೃದ್ಧಿಗೆ ಗಮನ ಹರಿಸಲಿ. ಜನರ ಮುಗ್ದತೆಯನ್ನು ಬಂಡವಾಳ ಮಾಡಿಕೊಂಡಿರುವ ಬಿಜೆಪಿ ತನ್ನ ಸುಳ್ಳು ಸುದ್ಧಿ ಫ್ಯಾಕ್ಟರಿಗಳ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುವುದರಲ್ಲೇ ವ್ಯಸ್ತವಾಗಿದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *