
ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಡಿವೈಡ್ ರ್ ಮೇಲೇರಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಧಾರ್ಮಿಕ ಪ್ರವಾಸಿ ಕ್ಷೇತ್ರದ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಡಿವೈಡ್ ರ್ ತಡೆ, ಸೂಚನಾ ಲೈಟ್ಸ್, ಮತ್ತಿತರ ಪರಿಕರಗಳು ಹಾನಿಗೀಡಾಗಿದೆ. ಸದಾ ಪ್ರವಾಸಿಗರು, ಸ್ಥಳೀಯರು ತುಂಬಿರುವ ಈ ಪ್ರದೇಶದಲ್ಲಿ ಅಪಘಾತ ನಡೆದ ಸಂದರ್ಭ ನಿರ್ಜನ ಪ್ರದೇಶವಾಗಿದ್ದು ಹೆಚ್ಚಿನ ಅಪಾಯ ಸಂಭವಿಸಿಲ್ಲ. ಉಚ್ಚಿಲ ಪ್ರದೇಶದಲ್ಲಿ ದಿನನಿತ್ಯ ಎಂಬಂತೆ ಅಪಘಾತ, ಸಾವು ನೋವು ಸಂಭವಿಸುತ್ತಿದ್ದು ಈ ಅಪಘಾತ ಅಪಾಯಕಾರಿ ಆಗಿಲ್ಲ ಎಂದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

