×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ನೂತನ ಶೀತಲೀಕೃತ ಶವಗಾರ ಕೊಡುಗೆ. ಉದ್ಘಾಟಿಸಿದ : ಶಾಸಕ ಲಾಲಾಜಿ ಮೆಂಡನ್*

ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಶೀತಲಿಕೃತ ಶವಗಾರವನ್ನು ಸರಕಾರದ ಅನುದಾನ ಮತ್ತು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಕೊಡುಗೆ ಯಾಗಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮವಾಗಿ ನೂತನ ಶೀತಲಿಕೃತ ಘಟಕ ಚಾಲನೆಗೊಂಡಿದ್ದು ಉತ್ತಮ ಬೆಳವಣಿಯಾಗಿದ್ದು.. ಅಮೃತಯೋಜನೆಯಡಿ ತನ್ನ ಶಿಫಾರಸ್ಸಿನ ಮೇರೆಗೆ 20 ಲಕ್ಷ ಅನುದಾನದಲ್ಲಿ ಶವಗಾರ ಕಟ್ಟಡ ನಿರ್ಮಾಣಗೊಂಡಿದ್ದು ಹಾಗೂ ನೂತನ ಶವಗಾರಕ್ಕೆ 5 ಲಕ್ಷ ಮೊತ್ತದ ಶೀತಲಿಕೃತ ಘಟಕವನ್ನು “ಸಹಕಾರ ಸಪ್ತಾಹ” ನಿಟ್ಟಿನಲ್ಲಿ ಕೊಡಮಾಡಿದ ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರೆ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರು ವೈ. ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ನಾಗಭೂಷಣ್ ಉಡುಪ, ತಾಲೂಕು ವೈದ್ಯಾಧಿಕಾರಿ ವಾಸುದೇವ್ ಉಪಾಧ್ಯಾಯ, ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ, ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷರು ಸಹಕಾರ ರತ್ನ ಯಶಪಾಲ್ ಸುವರ್ಣ, ಕೆ ವಿನಾಯಕ್ ರಾವ್ ಅಧ್ಯಕ್ಷರು ಸೇವಾಭಾರತಿ ಬೆಳ್ತಂಗಡಿ, ನವೀನ್ ಚಂದ್ರ ಶೆಟ್ಟಿ ಪ್ರಕಾಶ್ ಶೆಟ್ಟಿ ಪಾದ ಬೆಟ್ಟ ರವಿ ಶೆಟ್ಟಿ ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಾಡುರಂಗ ಕೋಟ್ಯಾನ್ ಅಧ್ಯಕ್ಷರು ಹೆಜಮಾಡಿ ಗ್ರಾಮ ಪಂಚಾಯತ್, ಗಾಯತ್ರಿ ಪ್ರಭು ಅಧ್ಯಕ್ಷರು ಪಲಿಮಾರು ಗ್ರಾಮ ಪಂಚಾಯತ್, ರಾಜಶ್ರೀ ಕಿಣಿ ವೈದ್ಯಾಧಿಕಾರಿ ಪಡುಬಿದ್ರೆ ಆರೋಗ್ಯ ಕೇಂದ್ರ, ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಹಳೇವಿದ್ಯಾರ್ಥಿ ಸಂಘ ಗಣಪತಿ ಶಾಲೆ ಪಡುಬಿದ್ರೆ ಹಾಗೂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು*

video l

https://youtu.be/Bwb2UOtRDO8

Leave a Reply

Your email address will not be published. Required fields are marked *