×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟುಮ್ ಗಾಲ ಛದ್ಮವೇಷ ಸ್ಪರ್ಧೆ

ಕಾಪು : ಪಾಠದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿ. ಮಾನದಂಡವಲ್ಲ. ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ ಎಂದು ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಹೇಳಿದರು. ರ್ಯಾಂಕ್

ಅವರು ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವದ ವಿದ್ಯೋತ್ಸವ ಪ್ರಯುಕ್ತ ಕಾರ್ಯಕ್ರಮದ ಅಂಗವಾಗಿ ಶನಿವಾರ ಜರಗಿದ ಉಡುಪಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟುಮ್ ಗಾಲ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ವೈದ್ಯರಾದ ಡಾ. ಅನುಪ್ ಪೂಜಾರಿ ಕಟಪಾಡಿ, ಶಾಲಾ ಹಳೆ ವಿದ್ಯಾರ್ಥಿನಿ ಡಾ. ಸಲ್ಪ ಮಾತನಾಡಿದರು. ಶಾಲಾ ಸಂಚಾಲಕ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಆಚಾರ್ಯ, ತೀರ್ಪುಗಾರರಾದ ಮನೋಜ್ ಗಣೇಶಪುರ, ಅನ್ವಿತಾ ಕುಲಾಲ್, ಉಪಪ್ರಾಂಶುಪಾಲೆ ನಿಶ್ಚಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಯೋಜಕರಾದ ಆಶಿತಾ, ಶೋಭ, ಶಾಲಾ ವಿದ್ಯಾರ್ಥಿ ನಾಯಕರುಗಳಾದ ಕೀರ್ತನ್ ಎಂ.ಕೋಟ್ಯಾನ್, ಚೈತ್ರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಾತ್ವಿಕಾ, ಶ್ರೇಯ, ರಚನಾ ಪ್ರಾರ್ಥಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಸಾಕ್ಷತ್ ಯು.ಕೆ., ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಫಾತಿಮ ಝನಬ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ತನಿಷ್ಕ ಸ್ವಾಗತಿಸಿದರು. ನಿಧಿ ವಂದಿಸಿದರು

Leave a Reply

Your email address will not be published. Required fields are marked *