

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ೬೬ರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ತಂದೆ ಮಗನಿಗೆ ಡಿಕ್ಕಿಯಾಗಿ ಇಬ್ಬರ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಲಾರಿಯನ್ನು ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ ಹಾಗೂ ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ತಂಡದ ತ್ವರಿತ ಕಾರ್ಯಚರಣೆಯಿಂದ ಮೂಡಬಿದ್ರೆ ಬಳಿ ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಬಸ್ಸಿಳಿದು ರಸ್ತೆ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಡಿಕ್ಕಿಯಾದ ಪರಿಣಾಮ ತಂದೆಯ ದೇಹ ಲಾರಿಯಡಿಗೆ ಬಿದ್ದು ಛಿದ್ರಗೊಂಡರೆ, ಮಗ ಗುರುವಾರ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ ಲಾರಿ ಗುಜರಾತಿನ ಸೂರತ್ ನಿಂದ ಪ್ಲಾಸ್ಟಿಕ್ ಕಚ್ಚಾವಸ್ತುಗಳನ್ನು ಹೇರಿಕೊಂಡು ಮೂಡಬಿದರೆ ಸಮೀಪದ ಗಂಜಿಮಠ ಎಂಬಲ್ಲಿನ ಫ್ಯಾಕ್ಟರಿಗೆ ಕಳೆದ ಮೂರು ದಿನಗಳ ಹಿಂದೆ ಹೊರಟಿತ್ತು.ಬುಧವಾರ ಮುಂಜಾನೆ ಆರು ಗಂಟೆಯ ಸುಮಾರಿಗೆ ಉಚ್ಚಿಲ ಬಳಿ ಬರುತ್ತಿದ್ದಂತೆ ಚಾಲಕನ ನಿದ್ದೆಯ ಮಂಪರಿನಿಂದಾಗಿ ಲಾರಿ ರಸ್ತೆ ಬಿಟ್ಟು, ಮಣ್ಣರಸ್ತೆಯಲ್ಲಿ ನಿಂತಿದ್ದ ತಂದೆ ಮಗನಿಗೆ ಡಿಕ್ಕಿಯಾಗಿ ಪರಾರಿಯಾಗಿತ್ತು.ಲಾರಿಯ ಪತ್ತೆಗಾಗಿ ಕಾರ್ಯಚರಣೆ ಆರಂಭಿಸಿದ ಪೋಲಿಸರು, ಮಹಾಲಕ್ಷಿö್ಮ ದೇವಸ್ಥಾನ, ಹೆಜಮಾಡಿ ಟೋಲ್‌ನ ಸಿಸಿ ಟಿವಿ ಪರೀಕ್ಷಿಸಿದ ಪೋಲಿಸರು ಮೂಡಬಿದರೆ ಬಳಿ ಹದಿನಾಲ್ಕು ಚಕ್ರ ಹೊಂದಿದ್ದ ಬ್ರಹತ್ ಲಾರಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಲಾರಿ ಸಹಿತ ಚಾಲಕ ಪಡುಬಿದ್ರಿ ಪೊಲೀಸರ ವಶದಲ್ಲಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

