ಶಿರ್ವ: ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ನವೆಂಬರ್ 17, ಸೋಮವಾರ, ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನಾಬ್ ಖಾಲಿದ್ ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನೆರವೇರಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದ ಜನಾಬ್ ಅಶ್ರಫ್ ಕೋಡಿ ಬೆಂಗ್ರೆಯವರು ಮಾತನಾಡಿ, “ಗ್ರಾಮೀಣ ಪ್ರದೇಶಗಳಿಂದ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಲು ಶಾಲಾ ಹಂತದಿಂದಲೇ ಇಂತಹ ಕ್ರೀಡೋತ್ಸವಗಳು ಮಹತ್ತರ ಪಾತ್ರವಹಿಸುತ್ತವೆ,” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಜನಾಬ್ ಇಬ್ರಾಹಿಂ ಕೋಟ ಹಾಗೂ ಅತಿರಿಕ್ತ ಉಪ ಆಯುಕ್ತರಾದ ಜನಾಬ್ ಆಬೀದ್ ಗಡಿಯಾಲ್ ರವರು ಮಾತನಾಡಿ, ಮಕ್ಕಳಿಗೆ ಲೌಕಿಕ ಮತ್ತು ಧಾರ್ಮಿಕ ಜ್ಞಾನದ ಜೊತೆಗೆ ಕ್ರೀಡಾ ಜ್ಞಾನವೂ ಅವಶ್ಯಕ ಎಂದು ಮನದಟ್ಟಿ ಹೇಳಿದರು.

ಕುಮಾರಿ ಫಾತಿಮಾ ಅಝ್ಬಾ ಮಾತನಾಡಿ, “ವಿದ್ಯೆಯನ್ನು ಶ್ರಮಪಟ್ಟು ಕಲಿಯುವುದರ ಜೊತೆಗೆ ಉತ್ತಮ ಫಲಿತಾಂಶಕ್ಕಾಗಿ ಅಲ್ಲಾಹನಲ್ಲಿ ಭರವಸೆ ಇಟ್ಟಲ್ಲಿ ಅದು ಖಂಡಿತವಾಗಿಯೂ ಸಾಧ್ಯ,” ಎಂದರು.
ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಖಾಲಿದ್, ಜನಾಬ್ ಅಶ್ರಫ್ ಕೋಡಿ ಬೆಂಗ್ರೆ, ಜನಾಬ್ ಇಬ್ರಾಹಿಂ ಕೋಟ, ಜನಾಬ್ ಉಮರ್ ಇಸ್ಮಾಯಿಲ್, ಜನಾಬ್ ಹಸನಬ್ಬ ಶೇಖ್, ಕುಮಾರಿ ಫಾತಿಮಾ ಅಝ್ಬಾ, ಶಾಲಾ ಧರ್ಮಗುರುಗಳಾದ ಮೌಲಾನಾ ಇಸ್ತಿಹ್ಸಾನ್ ಅಹ್ಮದ್ ಖಾನ್, ಮೌಲಾನಾ ಹಸನ್ ನದ್ವಿ, ಮೌಲಾನಾ ಹಾಫಿಝ್ ಅಲಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಖೈರುನ್ನಿಸ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ವಫಾ ಹಾಗೂ ಶ್ರೀಮತಿ ಶಿಫಾ ನಿರೂಪಿಸಿ, ಧನ್ಯವಾದಗಳನ್ನು ಸಲ್ಲಿಸಿದರು.

