ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಮವಸ್ತ್ರ ವಿತರಣೆ ನಡೆಯಿತು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾll ಕೆ .ಪ್ರಶಾಂತ್ ಶೆಟ್ಟಿ ಯವರು ,ಸಂಘದ ಅಧ್ಯಕ್ಷರು ಪ್ರತೀ ವರ್ಷವೂ ಕೂಡಾ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ,ಪುಸ್ತಕ,ನೀಡುವುದಲ್ಲದೆ, ನಮ್ಮ ವಿದ್ಯಾಸಂಸ್ಥೆಯ ಪ್ರಗತಿಗೆ ಬೆನ್ನುಲುಬಾಗಿ ಸಹಕರಿಸುತ್ತಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಮಂಡಳಿಯ ಮಾಜಿ ಸದಸ್ಯರೂ, ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ಸದಸ್ಯರೂ ಆದ ಕಾಪು ದಿವಾಕರ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು,ತನ್ನ ಹಾಲು ಉತ್ಪಾದಕರ ಸಹಕಾರ ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ಕನ್ನಡದ ಮಕ್ಕಳ ಕಲಿಕೆಗೂ ನೀಡಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಬೇಕು,ಬಡ ಮಕ್ಕಳಿಗೂ ಇಂತಹ ಸಹಕಾರವನ್ನು ನೀಡಿದರೆ ಅವರ ಕಲಿಕೆಗೆ ಪ್ರೇರಣೆ ಸಿಗುತ್ತದೆ, ಮುಂದೆ ಅವರಲ್ಲಿಯೂ ಸಹಕಾರ ನೀಡುವ ಮನೋಭಾವನೆ ಮೂಡುತ್ತದೆ ಎಂಬ ಸಂದೇಶ ನೀಡಿದರು.ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಸುಂದರ್,ಐತಪ್ಪ ಕೋಟ್ಯಾನ್, ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಪ್ರಾಂಶುಪಾಲ ನೀಲಾನಂದ ನಾಯ್ಕ್,ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಹಾಲು ಉತ್ಪಾದಕರ ಸಂಘದ ಸಮಿತಿಯ ಕಾರ್ಯದರ್ಶಿ ಐರಿನ್ ಜ್ಯೋತಿ,ಸದಸ್ಯರು,ಶಿಕ್ಷಕರು ,ಹೆತ್ತವರು,ಮಕ್ಕಳು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯಸ್ಥೆ ಕೃಪಾ ಅಮ್ಮನ್ನ ಸ್ವಾಗತಿಸಿ, ನಿರೂಪಿಸಿದರು.ವಿದ್ಯಾರ್ಥಿನಿ ಗುಲ್ಜಾರ್ ಪರ್ವೀನ್ ವಂದಿಸಿದರು.

