ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ವನ್ನು ಕಟಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪಾ ಬೆಳಗಿಸಿ ನನ್ನ ಕಾಪು ಕ್ಷೇತ್ರ ದ ಎಲ್ಲಾ ನಾಗರೀಕ ರ ಬಳಿಗೆ ಹೋಗಿ ಅವರ ಆಹ ವಾಲು ಸ್ವೀಕರಿಸಿ ಅವರ ಕಷ್ಟ ಸುಖ ಗಳಿಗೆ ಸ್ಪಂದಿಸುವ ಭಾಗ್ಯ ದೇವರು ಕೊಟ್ಟಿದ್ದಾರೆ ಜನರು ನನ್ನ ನ್ನು ಶಾಸಕ ನಾಗಿ ಮಾಡಿ ಅವಕಾಶ ನೀಡಿದ್ದಾರೆ , ಎಲ್ಲಾ ಗ್ರಾಮ ಗಳಿಗೆ ನಾನು ಎಲ್ಲಾ ಅಧಿಕಾರಿಗಳೊಂದಿಗೆ ಅವರ ಸಮಸ್ಯೆ ಮತ್ತು ಅಗತ್ಯ ಅವಶ್ಯಕತೆ ಗಳ ಬಗ್ಗೆ ಚಿಂತನ ಮತ್ತು ಸ್ಪಂದನೆ ಕಾರ್ಯಕ್ರಮ ಮಾಡುದು ನನ್ನ ಕರ್ತವ್ಯ, ಯಾವುದೇ ಅಧಿಕಾರಿ ಗಳು ಜನರಿಗೆ ತೊಂದರೆ ಆಗದಂತೆ ಸಹಕರಿಸಿ ಎಂದು ಅಧಿಕಾರಿ ಗಳಿಗೆ ಸೂಚನೆ ನೀಡಿದ ರು . ತನ್ನ ಕ್ಷೇತ್ರ ದ ಅತೀ ದೊಡ್ಡ ಸಮಸ್ಯೆ ಯಾದ ಏಕ ವಿನ್ಯಾಸ ಮತ್ತು 9/11 ದೃಢ ಪತ್ರಿಕೆ ನೀಡುವಲ್ಲಿ ಎಲ್ಲಾ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಗಳು ಮತ್ತು ಯೋಜನಾ ಪ್ರಾಧಿಕಾರ ದ ಅಧಿಕಾರಿ ಗಳು ಮದ್ಯ ವರ್ತಿ ಗಳಿಂದ ತೊಂದರೆ ಯಾಗದಂತೆ ಮತ್ತು ಯಾರು ಸರಿ ಯಾದ ದಾಖಲೆ ನೀಡುತ್ತಾರೆ ಅವರಿಗೆ ಸರಿಯಾದ ಸೇವೆ ನೀಡಬೇಕು ವಿಳಂಬ ಮಾಡದೇ ಸಮಸ್ಯೆ ಯಾಗದಂತೆ ಗಮನ ನೀಡ ಬೇಕು ಎಂದು ಹೇಳಿದರು , ಈ ಬಗ್ಗೆ ಎಲ್ಲಾ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದರು, ಸಾರ್ವಜನಿಕರ ಸೇವೆ ಗೆ ಈ ರೀತಿಯ ಅವಕಾಶ ಮಾಡಿ ಕೊಡುತ್ತಿರುವ ಶಾಸಕರಿಗೆ ಅಭಿನಂದನೆಗಳು ನಾನು ಮತ್ತು ನಮ್ಮ ಎಲ್ಲಾ ಅಧಿಕಾರಿ ಗಳು ಸದಾ ಸಾರ್ವಜನಿಕ ರ ಅಗತ್ಯ ಸೇವೆ ಗೆ ಸದಾ ಸಿದ್ದ ಎಂದು ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಸಭೆ ಯನ್ನು ಉದ್ದೇಶೀಸಿ ಮಾತನಾಡಿ ದರು ಪಂಚಾಯತ್ 25 ಶೇಕಡ ಅನುದಾನದಲ್ಲಿ ವಿವಿಧ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಸುಕನ್ಯ ಸಮೃದ್ಧಿ ಯೋಜನೆಯ ಬಾಂಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಬಿ ಶೆಟ್ಟಿ, ಉಪಾಧ್ಯಕ್ಷರಾದ ಸುಗುಣಾ ಪೂಜಾರ್ತಿ, ಕಾಪು ತಹಶೀಲ್ದಾರರಾದ ಪ್ರತೀಭಾ ಆರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಪ್ರಾಧಿಕಾರ ಯೋಜನಾ ಅಧಿಕಾರಿ ಕುಮಾರಿ ಶ್ರುತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಇನಾಯತ್, ಕಟಪಾಡಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

