×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅ.11 : ಕೆ.ಪಿ.ಸಿ.ಸಿ ಆಯೋಜನೆಯಲ್ಲಿ ಬೃಹತ್‌ ಉದ್ಯೋಗ ಮೇಳ

ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ ಅ.11, ಶನಿವಾರ “ಉಚಿತ ಬೃಹತ್ ಉದ್ಯೋಗ ಮೇಳವು ಕಾಪು ದಂಡತೀರ್ಥ ಪಿ.ಯು.ಕಾಲೇಜು ಮತ್ತು ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಉಳಿಯಾರಗೋಳಿ ಕಾಪುವಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ರ ವರೆಗೆ ನಡೆಯಲಿದೆ ಎಂದು ಉದ್ಯೋಗ ಮೇಳದ ರೂವಾರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ತಿಳಿಸಿದರು. ಮಾಹಿತಿ ನೀಡಿದರು.

 

ನಿರುದ್ಯೋಗಿ ಯುವಕ, ಯುವತಿಯರಿಗಾಗಿ ರಾಜ್ಯ ಹಾಗೂ ಸ್ಥಳೀಯ ಸುಮಾರು 50ಕ್ಕಿಂತ ಹೆಚ್ಚಿನ ಪ್ರತಿಷ್ಠಿತ  ಕಂಪೆನಿಗಳು ಭಾಗವಹಿಸುತ್ತಿದ್ದು, ಕಾರ್ಯಕ್ರಮದ ಬಗ್ಗೆ ಸಕಲ ಸಿದ್ದತೆಗಳು ಆರಂಭವಾಗಿದೆ ಎಂದು ತಿಳಿಸಿದರು.

ಐಟಿಐ, ಸ್ನಾತಕೋತ್ತರ ಪದವಿ, ಎಂ.ಬಿ.ಎ. ಇಂಜಿನಿಯರಿಂಗ್, ಇನ್ನಿತರ ಶೈಕ್ಷಣಿಕ ಅರ್ಹತೆ ಪಡೆದ ಉದ್ಯೋಗಾಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಐಟಿ ಬಿಟಿ, ಆಟೋಮೊಬೈಲ್ ಎಜುಕೇಷನ್, ರಿಟೇಲ್, ಮಾರ್ಕೆಟಿಂಗ್, ಹೌಸ್ ಕೀಪಿಂಗ್, ಪಾರ್ಮಸಿ, ಇನ್ಸೂರೆನ್ಸ್, ಬ್ಯಾಂಕ್ ಲೋನ್, ಬ್ಯಾಂಕಿಂಗ್, ಹೋಟೆಲ್ ಮ್ಯಾನೆಜ್‌ಮೆಂಟ್, ಇಲೆಕ್ಟ್ರಿಕಲ್ಸ್, ಫಿಟ್ಟರ್, ನರ್ಸಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗ ಲಭಿಸಲಿದೆ.

ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10 ರೆಸ್ಯೂಮ್ ಗಳನ್ನು ತರತಕ್ಕದ್ದು. ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಲಾಗುವುದು. ಅಲ್ಲದೆ ಯಾವ ಕಂಪೆನಿಯಲ್ಲಿ ಉದ್ಯೋಗ ಬಯಸುತ್ತಾರೋ ಅದನ್ನು ಪಡೆಯಲು ಅವಕಾಶವಿದ್ದು, ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾಯ ಕಂಪೆನಿಗಳು ಕಾರ್ಯಕ್ರಮದ ದಿನದಂದೇ ನೇಮಕಾತಿ ಪತ್ರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇದೊಂದು ಜಿಲ್ಲಾ ಮಟ್ಟದ ಮೇಳವಾಗಿದ್ದು, ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಪದವಿಪೂರ್ವ ಕಾಲೇಜಿನ ಮತ್ತು ಪದವಿ ಕಾಲೇಜಿನ ಅಭ್ಯರ್ಥಿಗಳು ಭಾಗವಹಿಸಬಹುದು. ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಚಾರ ನೀಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯೋಗ ಪಡೆಯಬೇಕೆಂದು ತಿಳಿಸಿದರು.

 ವೈ .ಸುಕುಮಾರ್ ಜಿತೇಂದ್ರ ಪುಟಾರ್ಡೋ, ಕಾಪು ದಿವಾಕರ ಶೆಟ್ಟಿ, ಹರೀಶ್ ಕಿಣಿ,  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *