×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ : ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖಾ ಕಛೇರಿಯ ಉದ್ಘಾಟನೆ.

ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ, ಅಂಬಲಪಾಡಿ ಉಡುಪಿಯಲ್ಲಿ ಪ್ರಧಾನ ಕಚೇರಿಯನ್ನು ಕುಂದಾಪುರ, ಕಾಪು, ಬ್ರಹ್ಮಾವರದಲ್ಲಿ ಶಾಖೆಗಳನ್ನು ಹೊಂದಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದೀಗ ಕಾರ್ಕಳದಲ್ಲಿಯೂ ಹೊಸ ಹುಮ್ಮಸ್ಸಿನೊಂದಿಗೆ ಆರಂಭಗೊಂಡಿರುವುದು ಶ್ಲಾಘನೀಯ, ಇದರಿಂದ ಸವಿತಾ ಸಮಾಜವು ಸಾಮಾಜಿಕವಾಗಿ ಏಳಿಗೆ ಹೊಂದುತ್ತದೆ ಎಂದರು

ಉಡುಪಿ: ಸೌಹಾರ್ದ ಸಹಕಾರಿ ಸಂಘಗಳು ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತದೆ. ಸಮಾಜಮುಖಿಯಾದ ಕೆಲಸಗಳನ್ನು ಮಾಡುವುದರ ಜೊತೆಗೆ ಆರ್ಥಿಕತೆಗೂ ಸಹಾಯ ಮಾಡುತ್ತದೆ. ಸವಿತಾ ಸಮಾಜ, ಭಂಡಾರಿ ಸಮಾಜದವರು ಯಾವ ಸಮಯದಲ್ಲೇ ಆಗಲಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮರೆಯದೇ ಸಾಮಾಜಿಕವಾಗಿ ಸ್ಪಂದಿಸುವ ಸಮಾಜ ಎಂದು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿದರು. ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿಯ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಅ.7 ರಂದು ಆರಂಭಗೊಂಡ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಕಚೇರಿಯ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶ್ರಮ, ಪ್ರಾಮಾಣಿಕತೆ, ನಿಷ್ಠೆಗೆ ಮತ್ತೊಂದು ಹೆಸರು ಸವಿತಾ ಸಮಾಜ. ಅಂತಹ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಇಂದು ಕಾರ್ಕಳದಲ್ಲಿ ಸ್ವಂತ ನೂತನ ಕಛೇರಿಯನ್ನು ಅದು ಹೊಂದುವಂತಾಗಿದೆ. ಈ ಸಂಘದ ಏಳಿಗೆಗೆ ನಾನೂ ಸಹಕಾರ ನೀಡುತ್ತೇನೆ. ಸಂಘದ ಶ್ರಮವನ್ನು ಸಾಧನೆಯನ್ನು ರಾಜ್ಯ ಸರಕಾರದ ಗಮನಕ್ಕೂ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಸಮಾಜಮುಖಿ ಸಾಧನೆ: ಮಂಜುನಾಥ್ ಎಸ್.ಕೆ. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ, ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ್ ಎಸ್. ಕೆ.ಮಾತನಾಡಿ, ಸಣ್ಣದ್ದೊಂದು ಕಚೇರಿಯ ಮೂಲಕ ತನ್ನ ಪಯಣ ಆರಂಭಿಸಿದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇಂದು ಉಡುಪಿ ಜಿಲ್ಲೆಯ ಅಲ್ಲಲ್ಲಿ ಶಾಖೆಗಳನ್ನು ತೆರೆದಿದೆ ಮಾತ್ರವಲ್ಲ, ಈ ಶಾಖೆಗಳಲ್ಲಿ ಬ್ಯಾಂಕಿಗ್ ಸೌಲಭ್ಯ ಇರುವ ಜೊತೆಗೆ ಸೆಲೂನ್ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಇತ್ತೀಚಿಗೆ ಎರಡು ಅಂಗ ಸಂಸ್ಥೆಗಳಾದ ಟಿಶೂ, ಪೇಪರ್ ಉತ್ಪಾದನ ಘಟಕ ಅಮ್ಮುಂಜೆ ಮತ್ತು ಸವಿತಾ ಡಯಾಗೋಸ್ಟಿಕ್ ಸೆಂಟರ್ ಅಂಬಲಪಾಡಿ ಆರಂಭಿಸಲಾಗಿದ್ದು ಇದು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಖುಷಿಯ ಸಂಗತಿ ಸಂಘದ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುವುದು ಮಹತ್ವದ ಸಾಧನೆ ಎಂದರು. ಸಾಲ ಸೌಲಭ್ಯದ ಜೊತೆಗೆ ದೂರದೃಷ್ಟಿಯ ಕನಸು: ನವೀನ್ ಚಂದ್ರ ಭಂಡಾರಿ

ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ ಮಾತನಾಡಿ, ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 2007ರಲ್ಲಿ ಸವಿತಾ ಸಮಾಜ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು. ನಮ್ಮದೇ ಒಂದು ವ್ಯವಸ್ಥೆಯೊಂದನ್ನು ಹುಟ್ಟುಹಾಕುವ ಮೂಲಕ ನಮ್ಮ ಏಳಿಗೆಗೆ ನಾವೇ ಕಾರಣವಾಗಬೇಕು ಎನ್ನುವ ಉದ್ದೇಶದಿಂದ ಸಂಘವನ್ನು ಬ್ಯಾಂಕಿಂಗ್ ವ್ಯವಸ್ಥೆಯಂತೆ ಆರಂಭಿಸಿದೆವು. ಸಹಕಾರಿ ಸಂಘಗಳು ಲಾಭದ ಉದ್ದೇಶವನ್ನು ಮಾತ್ರ ಹೊಂದಿರಬಾರದು. ಜೊತೆಗೆ ಸಾಮಾಜಿಕ ಉದ್ದೇಶವನ್ನೂ ಹೊಂದಿರುವುದು ಅತ್ಯಗತ್ಯ. ಶೇ.0% ಬಡ್ಡಿಯಲ್ಲಿ ಕ್ಷೌರಿಕರಿಗೆ ಸಾಲ ಸೌಲಭ್ಯ ನೀಡಿದ್ದೇವೆ ಮತ್ತು ಕಡಿಮೆ ಬಡ್ಡಿದರದಲ್ಲಿ ಕ್ಷೌರಿಕರ ಕನಸುಗಳನ್ನು ನನಸು ಮಾಡಲು ಸಂಘ ಸಾಲ ಸೌಲಭ್ಯವನ್ನು ಅತ್ಯಂತ ವಿಶ್ವಾಸಾರ್ಹತೆಯಲ್ಲಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೌರಿಕರ ಅಂಗಡಿಯಲ್ಲಿ ಕಸದಂತೆ ಬಿದ್ದ ತಲೆಕೂದಲನ್ನು ಕೂಡ ವ್ಯರ್ಥವಾಗದಂತೆ ಸಂಗ್ರಹಿಸಿ ಅದರಿಂದಲೂ ವಿವಿಧ ಉತ್ಪನ್ನಗಳನ್ನು ಮಾಡುವ ಉದ್ದೇಶದಿಂದ ಕಂಪೆನಿಯನ್ನು ಕೂಡ ಆರಂಭಿಸುವ ಉದ್ದೇಶವಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾರಲ್ಲೂ ಕೈಚಾಚದೇ ಸ್ವಾಭಿಮಾನದ ಜೀವನವನ್ನು ಬದುಕಿದವರು ಕ್ಷೌರಿಕರು. ಕೊರೋನ ಕಾಲದಲ್ಲಿಯೂ ಎದೆಗುಂದದೇ ಜನಸೇವೆಯಲ್ಲಿ ತೊಡಗಿದವರು ಕ್ಷೌರಿಕರು. ಅಂತಹ ಕ್ಷೌರಿಕರ ಬದುಕು ಭಾವನೆಗಳಿಗೆ ಬೆಲೆ ಕೊಡುವ ನಿಟ್ಟಿನಲ್ಲಿ ಸಂಘ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ಮುಂದೆ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಯೋಚನೆ ಇದೆ. ಅದಕ್ಕೆ ಎಲ್ಲರ ಸಹಕಾರವೂ ಬೇಕಿದೆ ಎಂದರು. ಭಂಡಾರಿ ಮಹಾಮಂಡಲ, ಕಳ್ಳೂರು ಶ್ರೀ ನಾಗೇಶ್ವರ ದೇವಸ್ಥಾನ, ಬಾರ್ಕೂರು ಪ್ರಧಾನ ಕಾರ್ಯದರ್ಶಿ ಶೇಖರ್ ಭಂಡಾರಿ, ಪವರ್ ಪಾಯಿಂಟ್ ಬ್ಯಾಗ್ಸ್, ಕಾರ್ಕಳ ಇದರ ಮಾಲಕರಾದ ಮಹಾವೀರ ಹೆಗಡೆ, ಸವಿತಾ ಸಮಾಜದ ಸಂಘದ ಸಾಧನೆಗಳನ್ನು ಶ್ಲಾಫಿಸಿದರು.

ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ರಾಜು ಸಿ. ಭಂಡಾರಿ, ಹರ್ಷ ಭಾರತೀ ಫ್ಯಾಮಿಲಿ ಟ್ರಸ್ಟ್ ಉಡುಪಿಯ ಪ್ರವರ್ತಕರಾದ ಹರೀಶ್ ಸುವರ್ಣ, ಉಡುಪಿ-ದ.ಕ ಜಿಲ್ಲೆಯ ಸೌಹಾರ್ದ ಅಭಿವೃದ್ದಿ ಅಧಿಕಾರಿ ವಿಜಯ್ ಬಿ ಎಸ್, ಕಾರ್ಕಳ ಸವಿತಾ ಸಮಾಜದ ಅಧ್ಯಕ್ಷರಾದ ನಾಗೇಶ್ ಭಂಡಾರಿ, ನಿರ್ದೇಶಕರಾದ ವಿಶ್ವನಾಥ್ ಭಂಡಾರಿ ನಿಂಜೂರು ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ನಾಮನಿರ್ದೇಶಕರುಗಳಾದ ಸದಾಶಿವ ಬಂಗೇರ, ಕುರ್ಕಾಲು, ಶೇಖರ ಸಾಲಿಯಾನ್, ಆದಿಉಡುಪಿ ಸತೀಶ್ ಭಂಡಾರಿ ಕಾಪು, ನಾಗೇಶ್ ಭಂಡಾರಿ, ಬಜಗೋಳಿ, ಸುಮನ ಕೃಷ್ಣ ಭಂಡಾರಿ ಕಾರ್ಕಳ, ಶಿವಾನಂದ್ ಸಾಲಿಯಾನ್ ಬೆಳ್ಳಣ್, ನವೀನ್ ಭಂಡಾರಿ ಬನ್ನೂರು, ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ, ಶಿವರಾಮ ಭಂಡಾರಿ ಹಂದಾಡಿ, ಪಿ. ಚಂದ್ರಶೇಖರ್ ಭಂಡಾರಿ ಹುಣ್ಣೆಮಕ್ಕಿ, ಗೋಪಾಲ ಮಲ್ಯ ಬೈಂದೂರು, ಶ್ರೀಲತ ನರೇಂದ್ರ ಸಾಲ್ಯಾನ್, ಕೆ. ದಿನೇಶ್ ಭಂಡಾರಿ ಕೊಕ್ಕರ್ಣೆ, ಪ್ರಶಾಂತ್ ಭಂಡಾರಿ ಕೊಳಲಗಿರಿ ಮಧುಕರ್ ಭಂಡಾರಿ ಕೋಟೇಶ್ವರ, ರತನ್ ಸಾಲ್ಯಾನ್ ಕಾಪು, ಸಂದೀಪ್ ಸಾಲ್ಯಾನ್ ಹಾರಾಡಿ, ಪ್ರಶಾಂತ್ ಭಂಡಾರಿ ಬೈಂದೂರು, ಸುರೇಶ್ ಭಂಡಾರಿ ಹೆಬ್ರಿ, ಕಾರ್ಕಳ ತಾಲೂಕು ಸವಿತಾ ಸಮಾಜ ಸಂಘದ ಪ್ರವೀಣ್ ಭಂಡಾರಿ ಬೆಳ್ಳಣ್, ಹರೀಶ್ ಭಂಡಾರಿ ಕರಂಬಳ್ಳಿ, ಶಶಿಕಾಂತ್ ಭಂಡಾರಿ ಕುಂದಾಪುರ, ಭಾಸ್ಕರ್ ಭಂಡಾರಿ ಬೆಳಪು, ಪುನೀತ್ ಭಂಡಾರಿ ಬ್ರಹ್ಮಾವರ, ಸುರೇಶ್ ಸುವರ್ಣ ನಾವುಂದ ಕೃಷ್ಣಮೂರ್ತಿ ಭಂಡಾರಿ, ಹೆಬ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಂಡಾರಿ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ ದಂಪತಿಗಳಿಗೆ ಅಬಿನಂದಿಸಲಾಯಿತು

Leave a Reply

Your email address will not be published. Required fields are marked *