ಬಂಟಕಲ್, ಅ. 05 :ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಮಾಲೋಚನ ಘಟಕ, ಎಂ.ಆರ್.ಪೈ ಫೌಂಡೇಶನ್ ಮತ್ತು ಮುಂಬೈನ ಫೋರಮ್ ಆಫ್ ಫ್ರೀ ಎಂಟರ್‌ಪ್ರೆöÊಸ್‌ನ ಸಹಯೋಗದೊಂದಿಗೆ ಇಂಜಿನಿಯರಿಂಗ್, ಎಂಬಿಎ, ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ವಿದ್ಯಾರ್ಥಿಗಳಿಗಾಗಿ ದಿನಾಂಕ ೨೯ ಮತ್ತು ೩೦ ಸೆಪ್ಟೆಂಬರ್ ೨೦೨೫ ರಂದು ಎರಡು ದಿನಗಳ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಎಂ.ಆರ್.ಪೈ ಫೌಂಡೇಶನ್‌ನ ಟ್ರಸ್ಟಿ ಶ್ರೀಮತಿ ಗೀತಾ ಪೈ ಮತ್ತು ಗೌರವ ಅತಿಥಿಯಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀಮತಿ ಸ್ವಾತಿ ಕಪಾಡಿಯಾ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಎಂ.ಆರ್.ಪೈ ಫೌಂಡೇಶನ್‌ನ ತರಬೇತುದಾರರಾದ ಶ್ರೀ ಸಚಿನ್ ಕಾಮತ್ ಮತ್ತು ಶ್ರೀ ವಿವೇಕ್ ಪಟ್ಕಿ ಭಾಗವಹಿಸಿದ್ದರು. ಶ್ರೀಮತಿ ಸ್ವಾತಿ ಕಪಾಡಿಯಾ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿಯ ಮಹತ್ವದ ಬಗ್ಗೆ ತಿಳಿಸಿದರು ಮತ್ತು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಕಾಲೇಜಿನ ಆಡಳಿತ ಮಂಡಳಿಯವರನ್ನು ಶ್ಲಾಘಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಇವರು ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಕಲಿಸಲಾಗುತ್ತದೆ. ಆದರೆ ಜೀವನ ಮತ್ತು ನಾಯಕತ್ವ ಕೌಶಲ್ಯಗಳನ್ನು ಇಂತಹ ನಾಯಕತ್ವ ತರಬೇತಿಯ ಮೂಲಕ ಪಡೆದುಕೊಳ್ಳಬೇಕು ಎಂದರು. ಈ ಎರಡು ದಿನದ ತರಬೇತಿಯಲ್ಲಿ ಶ್ರೀ ಸಚಿನ್ ಕಾಮತ್ ಮತ್ತು ಶ್ರೀ ವಿವೇಕ್ ಪಟ್ಕಿ ಇವರು ವಿದ್ಯಾರ್ಥಿಗಳನ್ನು ಸಂವಾದಾತ್ಮಕ ಚಟುವಟಿಕೆಯ ಮೂಲಕ ತೊಡಗಿಸಿಕೊಂಡರು ಮತ್ತು ಸಂವಹನ ಕೌಶಲ್ಯ, ಗುರಿ ನಿಗದಿಪಡಿಸುವ ಪ್ರಾಮುಖ್ಯತೆ, ವೈಯಕ್ತಿಕ ಯಶಸ್ಸನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ತಿಳಿಸಿದರು. ಕನಸುಗಳು, ಆಸೆಗಳು ಮತ್ತು ಗುರಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು, ಸಮಯ ನಿರ್ವಹಣೆ, ಸ್ವಾಭಿಮಾನ ಮತ್ತು ಬದ್ದತೆ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು. ಈ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ ೩೦ ಸೆಪ್ಟೆಂಬರ್ ೨೦೨೫ರಂದು ನಡೆಯಿತು. ಎಂ.ಆರ್.ಪೈ ಫೌಂಡೇಶನ್‌ನ ಶ್ರೀ ಸಚಿನ್ ಕಾಮತ್ ಮತ್ತು ಶ್ರೀ ವಿವೇಕ್ ಪಟ್ಕಿ, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ
ಅಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿಯಾದ ಶ್ರೀಮತಿ ಅಕ್ಷಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

