
ಮುದರಂಗಡಿ ಗ್ರಾಮ ಪಂಚಾಯತ್ ನಲ್ಲಿ ಮಾಸಿಕ ಸಭೆ ಕರೆದು ಕೊನೆ ಕ್ಷಣದಲ್ಲಿ ರದ್ದು: ಸದಸ್ಯರ ಆಕ್ಷೇಪ.೫೪ನೇ ಮುದರಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ಇದ್ದರೂ, ಮಾಸಿಕ ಸಭೆಯನ್ನು ಕರೆದ ಅವರು ಗುರುವಾರ ರಾತ್ರಿ ಏಕಾಏಕಿ ಸಭೆಯನ್ನು ರದ್ದುಗೊಳಿಸಿದ ಘಟನೆ ಘಟಿಸಿದೆ. ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡೇವಿಡ್ ಡಿಸೋಜರವರು ಗ್ರಾಮ ಪಂಚಾಯತಿಗೆ ಆಗಮಿಸಿ ಪಿಡಿಒ ಶ್ರೀಮತಿ ಮುತ್ತು ಅವರಲ್ಲಿ ಈ ಬಗ್ಗೆ ಸೃಷ್ಟಿಕರಣ ಕೇಳಿದ್ದಾರೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ನ್ಯಾಯಾಲಯದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೂ. ಮಾಸಿಕ ಸಭೆ ಕರೆದ ಔಚಿತ್ಯ ವನ್ನು ಡೇವಿಡ್ ಡಿಸೋಜಾ ಪ್ರ‍್ರಶ್ನಿಸಿದ್ದಾರೆ.ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷರು ಇಲ್ಲದೆ ಹಲವಾರು ಕಡಿತಗಳು ಬಾಕಿ ಇದೆ. ಯಾವುದನ್ನು ಇತ್ಯರ್ಥ ಮಾಡಿಲ್ಲ. ಸಿಬ್ಬಂದಿಗಳಿಗೆ ಸಂಬಳವೂ ಸಿಕ್ಕಿಲ್ಲ. ತುರ್ತಾಗಿ ಗ್ರಾಮ ಪಂಚಾಯತ್ ವಿಸ್ತರಣಾಧಿಕಾರಿಯವರು ಆಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಡೇವಿಡ್ ಡಿಸೋಜಾ ಆಗ್ರಹಿಸಿದರು ನಂತರ 2ಗಂಟೆ ಸಮಯಕ್ಕೆ E O ರವರು ಬಂದು ಒಂದು ವಾರದೊಳಗೆ ಸಮಸ್ಯೆ ಯನ್ನು ಬಗೆಹರಿಸುದಾಗಿ ತಿಳಿಸಿದರು

