ಟೈಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿ, ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಸಹಯೋಗದೊಂದಿಗೆ ಸಮಿತಿಯ ರಜತ ಸಂಭ್ರಮ ರಾಜಾಂಗಣ ದಲ್ಲಿ ರವಿವಾರ ನಡೆದ ಟೈಲರ್ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶವನ್ನು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜವನ್ನು ಹೊಲಿಯುವವರು ಬೇಕೇ ಹೊರತು ತುಂಡು ಮಾಡು ವವರು ಬೇಡ. ಟೈಲರ್‌ಗಳು ಸಮಾಜ ವನ್ನು ಒಗ್ಗೂಡಿಸುವ ಕಾರ್ಯ ಮಾಡು ತ್ತಿದ್ದಾರೆ. ಟೈಲರ್ ವೃತ್ತಿ ಹಿಂದಿನ ಕಾಲದಿಂದಲೂ ಇದ್ದು ಎಲ್ಲರನ್ನೂ ಆಕರ್ಷಕವಾಗಿ ಗುರುತಿಸಿಕೊಳ್ಳುವಂತೆ ಮಾಡುವುದಾಗಿದೆಎಂದುಪರ್ಯಾಯ ಶ್ರೀಪುತ್ತಿಗೆ ಮಠಾಧೀಶಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು ಪ್ರಗತಿಗೆ ಸಂಘಟನೆ ಅವಶ್ಯ. ಸಂಘಟನೆ ಬಲಗೊಂಡಾಗ ಮಾತ್ರ ವೃತ್ತಿ ಬಾಂಧವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಹರಸಿದರು. ಈ ಸಂದರ್ಭದಲ್ಲಿ ಭವಿಷ್ಯನಿಧಿ ಮತ್ತು ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಹೊಲಿಗೆ ಕೆಲಸಗಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವುದು ಹೊಲಿಗೆ ಕೆಲಸಗಾರರಿಗೆ ವಾಸಕ್ಕಾಗಿ ಮನೆ ನಿರ್ಮಾಣ ಅಥವಾ ದುರಸ್ತಿ ಮಾಡಲು ಹಾಗೂ ಹೊಲಿಗೆ ಯಂತ್ರ ಖರೀದಿಸಲು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ನೀಡುವುದು. ಹೊಲಿಗೆ ಕೆಲಸಗಾರರಿಗೆ ಆರೋಗ್ಯ ವಿಮೆಯನ್ನು ಜಾರಿಗೊಳಿಸುವುದು ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ಜಾರಿಗೊಳಿಸುವುದು ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಮಸೂದೆಯಲ್ಲಿ ಸೂಕ್ತ ನಿರ್ಣಯ ರೂಪಿಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಲಾಯಿತು ಪ್ರದಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಪ್ರಾಸ್ತಾವಿಕವಾಗಿ ನುಡಿದರು
ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಿಗೆ ಸನ್ಮಾನ

ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ವಿಟ್ಠಲ್ ಶೆಟ್ಟಿ ವಿಲಿಯಂ ಮಚಾದೊ, ಅಬ್ದುಲ್ ಖಾದರ್, ಕೆ. ರಾಮಚಂದ್ರ ಭಂಡಾರಿ ಅವರನ್ನು ಸಮಾನಿಸ ಲಾಯಿತು. ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ಟೈಲರ್ಸ್ (ಎಸೆಸೆಲ್ಸಿಯಲ್ಲಿ 47, ದ್ವಿಪಿಯುಸಿಯಲ್ಲಿ 25) ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಮಠದ ರಮೇಶ್ ಭಟ್ ಅವರನ್ನು ಗೌರವಿಸಲಾಯಿತು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಂಘಟನೆಯ ಹಲವು ಬೇಡಿಕೆಗಳ ಈಡೇರಿಕೆಗೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ಹಾಗೂ ಹೊಲಿಗೆ ವೃತ್ತಿಯನ್ನು ಜವಳಿ ನಿಗಮಕ್ಕೆ ಸೇರಿಸಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಲು ಸಂಘಟನೆಯೊಂದಿಗೆ ಖುದ್ದಾಗಿ ನಾನು ಬರುವುದಾಗಿ ಅವರು ಭರವಸೆ ನೀಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಗುರುರಾಜ್ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ ಟಿಎ ರಾಜ್ಯ ಸಮಿತಿ ಅಧ್ಯಕ್ಷ ಬಿ.ಎ. ನಾರಾಯಣ, ದಿವಾನ ನಾಗರಾಜ ಆಚಾರ್ಯ, ಉದ್ಯಮಿ ಸುರೇಶ್ ಪುರೋಹಿತ್, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸುರೇಶ್ ಪಾಲನ್, ರಾಜೀವ ಆರ್. ಪೂಜಾರಿ, ಲಕ್ಷ್ಮೀ ಆರ್. ಭಟ್, ರಮಾನಂದ ಅತ್ತೂರು, ರವಿ ನಾಯಕ್, ನಿಕಟಪೂರ್ವ ಅಧ್ಯಕ್ಷ ನವೀನ್ ಬಿ. ರಾವ್, ಉಪಾಧ್ಯಕ್ಷರಾದ ಮಹಾಬಲ ಮೊಗವೀರ, ಬಿ.ಕೆ. ಶ್ರೀನಿವಾಸ, ಗೌರಿ ವಿ. ಪೂಜಾರಿ, ಜಿಲ್ಲಾ ಸಮಿತಿ ಹಾಗೂ ವಿವಿಧ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಶಾಂತ ಶೆಟ್ಟಿ ಹಾವಂಜೆ, ಸುಧಾಕರ ಕೆ.ಎನ್. ನಿರೂಪಿಸಿ, ಕೋಶಾಧಿಕಾರಿ ಯೋಗೀಶ್ ವಂದಿಸಿದರು

