
ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಗೋವಿಂದ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಶ್ರೀ ಚಕ್ರ ಇಂಡಸ್ಟ್ರಿ ಬಳಿ ಗಾರೆ ಕೆಲಸ ಮಾಡುತ್ತಿರುವಾಗ ಐವಾನ್ ಡಿಸೋಜ ರವರು ಪೋನ್ ಮಾಡಿ ಗ್ಯಾರೇಜಿಗೆ ಬರಲು ತಿಳಿಸಿದ್ದರು. ಅದರಂತೆ ಮಧ್ಯಾಹ್ನದ ವೇಳೆ ಕೈಗಾರಿಕಾ ಪ್ರದೇಶದಿಂದ ಹೋಗುತ್ತಿರುವಾಗ ನಿಟ್ಟೆಯ ಫಾರೂಕ್ ಹಾಗೂ ಆತನ ರೈಟರ್ ಅಲ್ಲಿಗೆ ಬಂದು ಇವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನೆಲಕ್ಕೆ ದೂಡಿ ಬೀಳಿಸಿ, ತುಳಿದು, ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಹಾಗೂ ಹಲ್ಲೆಯಿಂದ ಕೈಗೆ ತರಚಿದ ಗಾಯವಾಗಿದ್ದು, ಈ ಬಗ್ಗೆ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

