×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಾಲಿಗ್ರಾಮ: ಟಿ.ಎ.ಪಿ.ಸಿ.ಎಂ.ಎಸ್. ಹವಾನಿಯಂತ್ರಿತ ಶಾಖೆ ಉದ್ಘಾಟಿಸಿದ ಡಾ| ಎಂ.ಎನ್. ರಾಜೇಂದ್ರ ಕುಮಾ‌ರ್

ಶನಿವಾರ ಸಾಲಿಗ್ರಾಮದಲ್ಲಿ ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘ ನಿ. (ಟಿ.ಎ.ಪಿ.ಸಿ.ಎಂ.ಎಸ್.) ಇದರ ಹವಾನಿಯಂತ್ರಿತ ಶಾಖೆಯನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು.ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬಡವರು, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಯೋಜನೆಗಳನ್ನು ಕ್ರಮಬದ್ಧ ವಾಗಿ ತಲುಪಿಸುವಲ್ಲಿ ಸಹಕಾರಿ ಸಂಘಗಳು ಮುಂಚೂಣಿಯಲ್ಲಿವೆ. ಹೀಗಾಗಿ ಉದ್ಯೋಗ ಖಾತ್ರಿಯಂಥ ಯೋಜನೆಗಳನ್ನು ಗ್ರಾಮೀಣರಿಗೆ ತಲುಪಿಸಲು ಸಹಕಾರಿ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಬೇಕು. ಆಗ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು ಅಧ್ಯಕ್ಷ ವಹಿಸಿದ್ದ ಮೈರ್ಮಾಡಿ ಬಿ. ಅಶೋಕ್ ಕುಮಾರ್ ಶೆಟ್ಟಿ ನಮ್ಮ ಸಂಸ್ಥೆ ಪಡಿತರ ವಿತರಣೆ, ರಸಗೊಬ್ಬರ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದು ಆರ್ಥಿಕ ವ್ಯವಹಾರ ಗಳ ಮೂಲಕವೂ ಹೆಸರು ಗಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಯೋಜನೆಗಳನ್ನು ರೂಪಿಸುವುದಾಗಿ ತಿಳಿಇದೇ ಸಂದರ್ಭದಲ್ಲಿ ಡಾ, ಎಂ ಎನ್ ರಾಜೇಂದ್ರ ಕುಮಾ‌ರ್ ರವರನ್ನು ಸನ್ಮಾನಿಸಲಾಯಿತು

ಸಂಸ್ಥೆಯ ಅಧ್ಯಕ್ಷ ಮೈರ್ಮಾಡಿ ಬಿ. ಅಶೋಕ್ ಕುಮಾರ್ ಶೆಟ್ಟಿ, ಕೆ.ಜಯಪ್ರಕಾಶ್‌ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ಕೊಡವೂರು ರವಿರಾಜ್ ಹೆಗ್ಡೆ. ಡಾ.ಐ.ದೇವಿಪ್ರಸಾದ್‌ ಶೆಟ್ಟಿ ಬೆಳಪು ವೈ ಸುಧೀರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು ತಾಯಿಯ ಹೆಸರಿನಲ್ಲಿ ಒಂದು ಗಿಡ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಸಿ ವಿತರಿಸಲಾಯಿತು.

Leave a Reply

Your email address will not be published. Required fields are marked *