×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ : ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಹೇಶ್ ಅಂಚನ್ ಆಯ್ಕೆ

ಕಟಪಾಡಿ: ಕ್ಷೇತ್ರ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಮಹೇಶ್ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಮಹೇಶ್ ಅಂಚನ್‌ರವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಟಪಾಡಿ ಗಣೇಶೋತ್ಸವ ಸಮಿತಿ, ಮಟ್ಟು ಗಣೇಶೋತ್ಸವ ಸಮಿತಿ, ಜೆಸಿಐ ಕಟಪಾಡಿ, ಕಟಪಾಡಿ ಯುವ ವಾಹಿನಿ ಸಂಸ್ಥೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಮಹೇಶ್‌ ಅಂಚನ್‌ರವರು ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು. ಗೌರವಾದ್ಯಕ್ಷರಾಗಿ ದೇವಪ್ಪ ಬಿ ಪೂಜಾರಿ, ಉಪಾಧ್ಯಕ್ಷರುಗಳಾಗಿ ನಿರಂಜನ್ ಎನ್ ಪೂಜಾರಿ ಮತ್ತು  ಶಿವಾಜಿ ಎಸ್ ಸುವರ್ಣ, ಗೌ.ಪ್ರ. ಕಾರ್ಯದರ್ಶಿಯಾಗಿ ಸುಧೀರ್ ಡಿ ಬಂಗೇರ, ಜತೆ ಕಾರ್ಯದರ್ಶಿಗಳಾಗಿ ರವಿ ವಿ ಕೋಟ್ಯಾನ್ ಮತ್ತು ಗಂಗಾಧರ್ ಪೂಜಾರಿ,  ಕೋಶಾಧಿಕಾರಿ   ರಂಜಿತ್ ಆರ್ ಸುವರ್ಣ, ಜತೆ ಕೋಶಾಧಿಕಾರಿ ಯೋಗೀಶ್ ಆರ್ ಅಮೀನ್, ಸೇವಾದಳ ದಳಪತಿ ಶಿವಪ್ರಸಾದ್, ಮಹಿಳಾ ಸಂಚಾಲಕಿ ಶ್ರೀಮತಿ ಯೋಗಿತಾ ಮಹೇಶ್,  ಸದಸ್ಯರಾಗಿ ಸಾವಿತ್ರಿ ಗಣೇಶ್, ರಾಘು ಶಿವ ಪೂಜಾರಿ, ಪ್ರಕಾಶ್ ಡಿ ಪೂಜಾರಿ, ಶಶಿಧರ್, ಪ್ರಸಾದ್ ಬಂಗೇರ, ಅನಿಲ್ ಕುಮಾರ್, ಭಾಸ್ಕರ್ ಪೂಜಾರಿ, ಸದಾನಂದ ಪೂಜಾರಿ, ಉಮೇಶ್ ಕೋಟ್ಯಾನ್, ಶ್ರೀನಿವಾಸ್ ರವರು  2025 – 2027 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Leave a Reply

Your email address will not be published. Required fields are marked *