ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ 2022 -23 ಮತ್ತು 2023-24 ರ ಸಾಲಿನಲ್ಲಿ ನೂರು ಶೇಕಡಾ ಫಲಿತಾಂಶ ಪಡೆದ ಶಾಲೆಗಳನ್ನು ನಗದು ಪುರಸ್ಕಾರ ಹಾಗೂ ಅಭಿನಂದನಾ ಫಲಕಗಳನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ,ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಡಿ. ಡಿ. ಪಿ. ಐ. ಗಣಪತಿ ಹಾಗೂ ವಿವಿಧ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ,ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಜಿಲ್ಲೆಯ ಸರಕಾರಿ ,ಅನುದಾನಿತ,ಅನುದಾನ ರಹಿತ ಶಾಲೆಗಳ ಮುಖ್ಯಸ್ಥರುಗಳು ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು. 2023-24 ನೆಯ ಸಾಲಿನಲ್ಲಿ ಕಾಪುವಿನ ದಂಡತೀರ್ಥ ವಿದ್ಯಾಸಂಸ್ಥೆಯೂ ಕೂಡ ನೂರು ಶೇಕಡಾ ಫಲಿತಾಂಶ ಪಡೆದಿದ್ದು ಜಿಲ್ಲಾಧಿಕಾರಿಯವರು ಶಾಲೆಯ ಮುಖ್ಯಸ್ಥರನ್ನು ಪ್ರಶಸ್ತಿ ಫಲಕದೊಂದಿಗೆ ಗೌರವಿಸಿದರು.ಉತ್ತಮ ಫಲಿತಾಂಶ ಗಳಿಸಲು ಕಾರಣರಾದ ವಿದ್ಯಾರ್ಥಿಗಳು,ಹೆತ್ತವರು ಹಾಗೂ ಶಿಕ್ಷಕರನ್ನು ಸಂಚಾಲಕರಾದ ಡಾಕ್ಟರ್ ಕೆ ಪ್ರಶಾಂತ್ ಶೆಟ್ಟಿಯವರು ಅಭಿನಂದಿಸಿದರು.

