×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ದೀಪಾವಳಿ ಆಚರಣೆ

ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನಲ್ಲಿ ದೀಪಾವಳಿ ಆಚರಣೆ – ಕಾರ್ಯಕ್ರಮವನ್ನು ಕಾಲೇಜಿನ ಬ್ಯಾಸ್ಕೆಟ್‌ಬಾಲ್ ಮೈದಾನದಲ್ಲಿ “ಬೆಳಕು ಮತ್ತು ಏಕತೆಯ ಹಬ್ಬ” ಎಂಬ ವಿಷಯದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವೀದಾಸ್ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅವರುಮಾತನಾಡಿ ದೀಪಾವಳಿಯ ನಿಜವಾದ ಅರ್ಥವನ್ನು ವಿವರಿಸಿ, ಜ್ಞಾನ, ಸೌಹಾರ್ದತೆ ಮತ್ತು ಸಕಾರಾತ್ಮಕತೆಯನ್ನು ಹರಡುವ ಹಬ್ಬವೆಂದು ಹೇಳಿದರು.
ಡಾ. ಎಂ. ವಿಶ್ವನಾಥ ಪೈ ಎಂ ಜಿ ಎಂ ಕಾಲೇಜಿನ ಉಪಪ್ರಾಂಶುಪಾಲರು ಬಿಸಿಎ ಸಂಯೋಜಕರು ಹಾಗೂ ಡಾ. ಮಲ್ಲಿಕಾ ಎ.ಶೆಟ್ಟಿ ಬಿಕಾಂ/ಬಿಬಿಎ ಸಂಯೋಜಕರು ಉಪಸ್ಥಿತರಿದ್ದರು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ವಿವಿಧ ಮನರಂಜನಾ ಆಟೋಪಾಟಗಳು ಹಾಗೂ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು,ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *